ಶನಿವಾರಸಂತೆ, ನ. 28: ಸಮೀಪದ ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯಲ್ಲಿ ಸಂವಿಧಾನ ದಿನವನ್ನು ಸಂಸ್ಥೆ ಗೌರವಾಧ್ಯಕ್ಷ ಎಸ್.ಎಸ್. ನಾಗರಾಜ್ ಅಧ್ಯಕ್ಷತೆ ಯಲ್ಲಿ ಆಚರಿಸ ಲಾಯಿತು. ಮುಖ್ಯ ಶಿಕ್ಷಕ ಎಂ.ಎಸ್. ಅಬ್ದುಲ್ ರಬ್ ಮಾತನಾಡಿ, ಸಂವಿಧಾನದ ಮಹತ್ವವನ್ನು ತಿಳಿಸಿ, ಪ್ರತಿಜ್ಞಾವಿಧಿ ಬೋಧಿಸಿದರು. ಆಡಳಿತಾಧಿಕಾರಿ ಸುಬ್ರಮಣ್ಯ ಪ್ರಾಸ್ತಾವಿಕ ನುಡಿಯಾಡಿದರು. ಉಪನ್ಯಾಸಕ ಹೆಚ್. ಸೋಮಶೇಖರಪ್ಪ, ಶಿಕ್ಷಕರಾದ ಸುಮಾ, ಸುಶೀಲಾ, ಸುನೀಲ್ ಸಿಬ್ಬಂದಿ ಹಾಜರಿದ್ದರು.