ಶ್ರೀಮಂಗಲ, ನ. 28: ಶ್ರೀಮಂಗಲನಾಡು ವ್ಯವಸಾಯ ಉತ್ಪನ್ನ ಮಾರಾಟ ಮತ್ತು ಪರಿವರ್ತನ ಸಹಕಾರ ಸಂಘ ನಿಯಮಿತ ಇದರ 2020-25ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಅಜ್ಜಮಾಡ ಎಸ್. ಲವ ಕುಶಾಲಪ್ಪ ಮತ್ತು ಉಪಾಧ್ಯಕ್ಷರಾಗಿ ತಡಿಯಂಗಡ ಕಂಬಕರುಂಬಯ್ಯ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಶ್ರೀಮಂಗಲದಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಅಧ್ಯಕ್ಷ - ಉಪಾಧ್ಯಕ್ಷರ ಈ ಆಯ್ಕೆ ನಡೆಸಿದರು. ಸಭೆಯಲ್ಲಿ ನಿರ್ದೇಶಕರುಗಳಾದ ಮಲ್ಲಂಗಡ ಮುತ್ತಪ್ಪ, ಚೆಪ್ಪುಡಿರ ಪಾರ್ಥ, ತಡಿಯಂಗಡ ಶಶಿಸುಬ್ಬಯ್ಯ, ಹೆಚ್.ಎಸ್. ಕೇತು, ಉಣ್ಣಿ, ಚೋಕಿರ ಗೀತಾಹ್ಯಾರಿ, ಅಲ್ಲುಮಾಡ ಡೇಝಿ ತಿಮ್ಮಯ್ಯ, ವೆಂಕಟೇಶ್ಪ್ರಶಾದ್, ಮಾಚೀರ ಕೆ. ಮಾದಪ್ಪ, ಅಜ್ಜಮಾಡ ಸಿ. ಹ್ಯಾರಿ, ಕೆಡಿಸಿಸಿ ಬ್ಯಾಂಕ್ ನಾಮನಿರ್ದೇಶಕರಾದ ಹೊಟ್ಟೇಂಗಡ ಎಂ. ರಮೇಶ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೆ. ಲಕ್ಷ್ಮಣ್ ಹಾಜರಿದ್ದರು.