ಕಡಂಗ, ನ. 28: ‘ನಮ್ಮ ನಡೆ ಶಿಕ್ಷಣದ ಕಡೆ’ ಕೊಡಗು ಇದರ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಆನ್‍ಲೈನ್‍ನಲ್ಲಿ ಬುರ್ದಾ ಆಲಾಪನೆ, ಮಂಗೂಸ್ ಮೌಲೂದ್, ಮದ್ಹ್ ಗ್ರೂಪ್ ಹಾಡಿನ ಸ್ಪರ್ಧೆ ನಡೆಸಲಾಯಿತು. ಇದರ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಏಆಅಅ ಸಭಾಂಗಣ ಕಡಂಗದಲ್ಲಿ ‘ನಮ್ಮ ನಡೆ ಶಿಕ್ಷಣದ ಕಡೆ’ ಅಧ್ಯಕ್ಷ ಫತಾಹ್ ಕಡಂಗ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಅಬ್ದುಲ್ ನಿಝರ್ ಸಖಾಫಿ ಕಡಂಗ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಇಸ್ಮಾಯಿಲ್ ಹಾಜಿ ಹುಂಡಿ, ಮೊಹಿಯುದೀನ್ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ, ಬದ್ರಿಯಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಸುಲೈಮಾನ್ ಸಿ.ಎಂ., ಮಡಿಕೇರಿ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಬಸೀರ್ ಅಲಿ ನಾಪೆÇೀಕ್ಲು ಹಾಗೂ ಇತರರು ಇದ್ದರು.
ಸ್ಪರ್ಧೆಯಲ್ಲಿ ವಿಜೇತರಾದ ಶಫೀಕ್ ತಂಡ ಕುಂಜಿಲ, ನೌಫಲ್ ತಂಡ ಕಿಕ್ಕರೆ, ಹಾಶೀರ್ ತಂಡ ಎಮ್ಮೆಮಾಡು, ಶಿಯಾಬ್ ತಂಡ ಪೆÇನ್ನಂಪೇಟೆ ಅವರಿಗೆ ಬಹುಮಾನವನ್ನು ನೀಡಲಾಯಿತು. ಸ್ವಾಗತವನ್ನು ಮಜೀದ್ ಚೋಕಂಡಲ್ಲಿ ನಿರ್ವಹಿಸಿ, ವಂದನಾರ್ಪಣೆಯನ್ನು ಅಶ್ರಫ್ ಸಿ.ಎ. ಕಡಂಗ ಅವರು ನಿರ್ವಹಿಸಿದರು.