ಗೋಣಿಕೊಪ್ಪಲು, ನ. 28: ಮನೆಯಲ್ಲಿ ಯಾರು ಇಲ್ಲದಿರುವು ದನ್ನು ಮನಗಂಡ ಕಳ್ಳರು ಮನೆಯ ಗೋಣಿಕೊಪ್ಪಲು, ನ. 28: ಮನೆಯಲ್ಲಿ ಯಾರು ಇಲ್ಲದಿರುವು ದನ್ನು ಮನಗಂಡ ಕಳ್ಳರು ಮನೆಯ ಮಾಡಿರುವ ಘಟನೆ ಶ್ರೀಮಂಗಲ ಠಾಣಾ ವ್ಯಾಪ್ತಿಯ ಹರಿಹರ ಗ್ರಾಮ ದಲ್ಲಿ ನಡೆದಿದೆ.(ಮೊದಲ ಪುಟದಿಂದ)ಗ್ರಾಮದ ತೀತಿರ ಪೂವಮ್ಮ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು ಶ್ರೀಮಂಗಲ ಪೆÇಲೀಸ್ ಠಾಣೆಯಲ್ಲಿ ಕಳೆದ ಒಂದು ವಾರದ ಹಿಂದೆ ಪ್ರಕರಣ ದಾಖಲಾಗಿತ್ತು. ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಟ್ಟ ಸಿಪಿಐ ಪರಶಿವಮೂರ್ತಿ ಅವರು ಕಳ್ಳತನ ನಡೆಸಿದವರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿ ಆರೋಪಿಯನ್ನು ಹಿಡಿಯಲು ನಿರ್ದೇಶನ ನೀಡಿದ್ದರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆ ಕಾರ್ಯಪ್ರವೃತ್ತರಾದ ಎಸ್.ಐ.ಚಂದ್ರಪ್ಪ ಹಾಗೂ ತಂಡ ಆರೋಪಿಗಳನ್ನು ಕೆಲವೇ ದಿನಗಳಲ್ಲಿ ಬಂದೂಕು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿಯ ಮೇರೆ ಪೆÇನ್ನಂಪೇಟೆ ಸಮೀಪದ ಕಿರುಗೂರು ಗ್ರಾಮದ ಸುಮಂತ್ ಎಂಬಾತನನ್ನು ವಿಚಾರಣೆ ಒಳಪಡಿಸಿದ ತರುವಾಯ ಸತ್ಯಾಂಶ ಬೆಳಕಿಗೆ ಬಂದಿದೆ. ಸುಮಂತ್ ನೀಡಿದ ಸುಳಿವಿನ ಮೇರೆ ಕೋವಿಯನ್ನು ಖರೀದಿಸಿ ಅಕ್ರಮವಾಗಿ ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡಿದ್ದ ಪಿರಿಯಾಪಟ್ಟಣ ತಾಲೂಕಿನ ನೇರಳೆಕುಪ್ಪೆ ಗ್ರಾಮದ ಸುನಿಲ್ ಕುಮಾರ್ ಹಾಗೂ ನವೀನ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಗಳಿಂದ ಕೋವಿಯನ್ನು ವಶಪಡಿಸಿಕೊಂಡ ಪೆÇಲೀಸರು ಮಧ್ಯ ವರ್ತಿಯಾಗಿ ಕೆಲಸ ನಿರ್ವಹಿಸಿದ ದಯಾನಂದ ಎಂಬಾತನನ್ನು ದಸ್ತಗಿರಿ ಮಾಡಿ ಆತನಿಂದ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಹಾಗೂ ಕೋವಿ ಮಾರಾಟದಿಂದ ಬಂದ ಹಣವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಎ.ಎಸ್.ಐ.ಸಾಬು,ಪ್ರಾನ್ಸಿಸ್, ರಂಜಿತ್, ಮನೋಹರ್, ವಿಶ್ವನಾಥ, ಮನು ಭಾಗವಹಿಸಿದ್ದರು. ಠಾಣಾ ವ್ಯಾಪ್ತಿಯಲ್ಲಿ ನಕ್ಸಲರ ಚಟುವಟಿಕೆ ಹಿನ್ನೆಲೆಯಲ್ಲಿ ಈ ಪ್ರಕರಣ ಹೆಚ್ಚಿನ ಮಹತ್ವ ಪಡೆದು ಕೊಂಡಿತ್ತು. - ಹೆಚ್.ಕೆ.ಜಗದೀಶ್