ವೀರಾಜಪೇಟೆ, ನ. 28: ಗೋಮಾಳ ಜಾಗದ ರಕ್ಷಣೆಯ ಹೆಸರಿನಲ್ಲಿ ಸಂಘಟನೆಯ ಕೆಲವರು ತರ್ಮೆಕಾಡು ಪೈಸಾರಿಯಲ್ಲಿ ಕಳೆದ 40 ವರ್ಷಗಳಿಂದಲೂ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿರುವ ದಲಿತರು, ನಿರ್ಗತಿಕರು ನಿವಾಸಿಗಳ ಮೇಲೆ ದೌರ್ಜನ್ಯ ನಡೆಸಿ ಗುಡಿಸಿಲಿನ ಪ್ಲಾಸ್ಟಿಕ್ ಹೊದಿಕೆಗಳನ್ನು ಹರಿದು ಹಾಕಿ ಎಲ್ಲರೂ ಬೀದಿಗೆ ಬರುವಂತೆ ಮಾಡಿರುವುದು ಖಂಡನೀಯ. ಈ ನಿವಾಸಿಗಳಿಗೆ ಸರಕಾರ ರಕ್ಷಣೆ ನೀಡಿ ಪ್ರತಿಯೊಬ್ಬರಿಗೂ ಸೂರು ಯೋಜನೆಯಡಿಯಲ್ಲಿ ಹಕ್ಕುಪತ್ರ ನೀಡಬೇಕೆಂದು ಜನತಾ ದಳ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಆಗ್ರಹಿಸಿದರು. ತರ್ಮೆಕಾಡು ಪೈಸಾರಿ ಜಾಗಕ್ಕೆ ಕೆ.ಎಂ. ಗಣೇಶ್ ಹಾಗೂ ಪಕ್ಷದ ಕಾರ್ಯಕರ್ತರು ಭೇಟಿ ನೀಡಿ ಅಲ್ಲಿನ ವೀರಾಜಪೇಟೆ, ನ. 28: ಗೋಮಾಳ ಜಾಗದ ರಕ್ಷಣೆಯ ಹೆಸರಿನಲ್ಲಿ ಸಂಘಟನೆಯ ಕೆಲವರು ತರ್ಮೆಕಾಡು ಪೈಸಾರಿಯಲ್ಲಿ ಕಳೆದ 40 ವರ್ಷಗಳಿಂದಲೂ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿರುವ ದಲಿತರು, ನಿರ್ಗತಿಕರು ನಿವಾಸಿಗಳ ಮೇಲೆ ದೌರ್ಜನ್ಯ ನಡೆಸಿ ಗುಡಿಸಿಲಿನ ಪ್ಲಾಸ್ಟಿಕ್ ಹೊದಿಕೆಗಳನ್ನು ಹರಿದು ಹಾಕಿ ಎಲ್ಲರೂ ಬೀದಿಗೆ ಬರುವಂತೆ ಮಾಡಿರುವುದು ಖಂಡನೀಯ. ಈ ನಿವಾಸಿಗಳಿಗೆ ಸರಕಾರ ರಕ್ಷಣೆ ನೀಡಿ ಪ್ರತಿಯೊಬ್ಬರಿಗೂ ಸೂರು ಯೋಜನೆಯಡಿಯಲ್ಲಿ ಹಕ್ಕುಪತ್ರ ನೀಡಬೇಕೆಂದು ಜನತಾ ದಳ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಆಗ್ರಹಿಸಿದರು.
ತರ್ಮೆಕಾಡು ಪೈಸಾರಿ ಜಾಗಕ್ಕೆ ಕೆ.ಎಂ. ಗಣೇಶ್ ಹಾಗೂ ಪಕ್ಷದ ಕಾರ್ಯಕರ್ತರು ಭೇಟಿ ನೀಡಿ ಅಲ್ಲಿನ ಹಿಂದುಳಿದವರಿಗೆ ಪಕ್ಷ ಎಲ್ಲ ರೀತಿಯಿಂದಲೂ ರಕ್ಷಣೆ ಕೊಡುತ್ತದೆ. ಇಲ್ಲಿ ಗುಡಿಸಲು ಕಟ್ಟಿಕೊಂಡಿರುವ ಎಲ್ಲರೂ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪೈಸಾರಿ ನಿವಾಸಿಗಳ ಮೇಲೆ ದೌರ್ಜನ್ಯವೆಸಗಿರುವವರನ್ನು ಪತ್ತೆ ಹಚ್ಚಿ ಪೊಲೀಸರು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ತರ್ಮೆಕಾಡು ಪೈಸಾರಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯಿಂದ ಮನೆ ಕಟ್ಟಿಕೊಂಡಿದ್ದ ಪೂಜಾ (20) ಎಂಬ ಯುವತಿ ವೀರಾಜಪೇಟೆಯ ಸರಕಾರಿ ಕಾಲೇಜಿನಲ್ಲಿ ಅಂತಿಮ ಪದವಿಯ ವಿದ್ಯಾರ್ಥಿನಿಯಾಗಿದ್ದು ಆಕೆಗೆ ತಂದೆಯೂ ಇಲ್ಲ, ತಾಯಿಯೂ ಇಲ್ಲ. ತಮ್ಮನೊಂದಿಗೆ ಕೂಲಿ ಮಾಡಿ ಜೀವಿಸುತ್ತಿದ್ದು ತಾ. 24 ರಂದು ಗೋಮಾಳದ ಜಾಗಕ್ಕೆ ಬೇಲಿ ಹಾಕಿ ಅಧಿಕಾರಿಗಳು ಹಿಂತಿರುಗಿದ ನಂತರ ಸಂಘಟನೆಯ ತಂಡ ಆಕೆಗೆ ಕಿರುಕುಳ ನೀಡಿದೆ. ಈ ಸಂಬಂಧದಲ್ಲಿ ತಾಲೂಕು ಆಡಳಿತದ ಅಧಿಕಾರಿಗ ಳೊಂದಿಗೆ ವ್ಯವಹರಿಸುವುದಾಗಿ ಗಣೇಶ್ ಭರವಸೆ ನೀಡಿದರು.
ದೌರ್ಜನ್ಯಕ್ಕೊಳಗಾದ ಅದೇ ಪೈಸಾರಿಯ ನಿವಾಸಿ ಮಿನಿ ಡಿಸೋಜ, ಯಶೋಧ ಮತ್ತಿತರರ ಏಳು ಕುಟುಂಬ ಗಳು ಗೋಮಾಳದ ಹೆಸರಿನಲ್ಲಿ ತಮಗಾದ ಅನ್ಯಾಯವನ್ನು ಕೆ.ಎಂ. ಗಣೇಶ್ ಅವರ ಮುಂದೆ ತೋಡಿ ಕೊಂಡರು.
(ಮೊದಲ ಪುಟದಿಂದ)
ಬದಲೀ ವ್ಯವಸ್ಥೆ ಮಾಡದೆ ಗೋಮಾಳದ ಹೆಸರಿನಲ್ಲಿ ಒಕ್ಕಲೆಬ್ಬಿಸುವುದು ನ್ಯಾಯ ಸಮ್ಮತವಲ್ಲ. ದಾಖಲೆಯ ಪ್ರಕಾರ ತರ್ಮೆಕಾಡು ವಿನಲ್ಲಿ ಒಂದು ಎಕರೆಗೂ ಅಧಿಕ ಜಾಗ ಪೈಸಾರಿಯಾಗಿಯೇ ಉಳಿದಿದ್ದು ಈ ಜಾಗದಲ್ಲಿ ನಿರ್ಗತಿಕರು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿರುವುದು ತಪ್ಪಲ್ಲ, ಅತಿಕ್ರಮಣವೂ ಅಲ್ಲ, ಈ ಎಲ್ಲ ನಿವಾಸಿಗಳಿಗೆ ಆರ್ಜಿ ಗ್ರಾಮ ಪಂಚಾಯಿತಿ ಮೂಲ ಸೌಕರ್ಯವನ್ನು ಒದಗಿಸಿದೆ. ನಿವಾಸಿಗಳು ಜಾಗಕ್ಕೆ ಕಂದಾಯವನ್ನು ಪಾವತಿಸುತ್ತಿದ್ದು ಅದರ ರಶೀತಿಯನ್ನು ಹಾಜರುಪಡಿಸಿದ್ದಾರೆ ಎಂದರು.
ಈ ಸಂದರ್ಭ ಪಕ್ಷದ ತಾಲೂಕು ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್, ಡೆನ್ನಿ ಬೈರೋಸ್, ಯೋಗೀಶ್ ನಾಯ್ಡು, ಖಲೀಲ್ ಪಾಷಾ, ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ವಿ. ಸುನಿಲ್, ದಲಿತ ಸಂಘರ್ಷ ಸಮಿತಿಯ ಪರವಾಗಿ ಜಿಲ್ಲಾ ಸಮಿತಿಯ ಸಂಚಾಲಕ ಹೆಚ್.ಆರ್. ಪರಶುರಾಮ್, ಹೆಚ್.ಎಸ್. ಕೃಷ್ಣಪ್ಪ, ವಿ.ಕೆ. ರಜನಿಕಾಂತ್, ಸತೀಶ್ ಮತ್ತಿತರರು ಹಾಜರಿದ್ದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ.ಗೆ ಈ ಸಂಬಂಧ ದೂರು ನೀಡುವುದಾಗಿ ಕೆ.ಎಂ. ಗಣೇಶ್ ತಿಳಿಸಿದರು. ತರ್ಮೆಕಾಡು ಪೈಸಾರಿಗೆ ಜನತಾ ದಳದ ಕಾರ್ಯಕರ್ತರುಗಳ ತಂಡ ಹೋಗುವ ಮೊದಲು ಗೋಮಾಳ ಹೋರಾಟ ತಾಲೂಕು ಸಮಿತಿಯ ಸಂಚಾಲಕ ಎಂ.ಎಂ. ರವೀಂದ್ರ ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ಸಾಂತ್ವನ ಹೇಳಲು ಬಂದಿರುವುದಾಗಿ ‘ಶಕ್ತಿ’ಗೆ ತಿಳಿಸಿದರು.