ಶನಿವಾರಸಂತೆ, ನ. 27: ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2019-20ನೇ ಸಾಲಿನಲ್ಲಿ ರೂ. 26 ಲಕ್ಷದ 10 ಸಾವಿರ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಆರ್. ವೀರೇಂದ್ರ ಕುಮಾರ್ ಹೇಳಿದರು.
ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್. ಬಸಪ್ಪ ವಾರ್ಷಿಕ ವರದಿ ಮಂಡಿಸುತ್ತಾ, ಸಂಘದಲ್ಲಿ ಒಟ್ಟು 1,24,71,922ಪಾಲು ಬಂಡವಾಳ ಇರುತ್ತದೆ. ಸಂಘದಲ್ಲಿ 2,27,4,376 ವಿವಿಧ ಠೇವಣಿಗಳಿದ್ದು, 2019-20ನೇ ಸಾಲಿಗೆ ಕೊಡಗು ಡಿಸಿಸಿ ಬ್ಯಾಂಕಿನಿಂದ 10,57,16,480 ರೂ. ಕೆ.ಸಿ.ಸಿ. ಸಾಲ ಪಡೆದುಕೊಂಡು ಸಂಘದ 725 ಮಂದಿ ಸದಸ್ಯರಿಗೆ ರೂ. 11,24,9,256 ಕೆಸಿಸಿ ಸಾಲ ವಿತರಣೆ ಮಾಡಿದ್ದು, ಸಂಘದ 7 ಸ್ವಸಹಾಯ ಗುಂಪುಗಳಿಗೆ 18 ಲಕ್ಷ ರೂ. ಸಾಲ ವಿತರಣೆ ಮಾಡಲಾಗಿದೆ ಎಂದರು. ಸಭೆಯಲ್ಲಿ ಪ್ರಮುಖ ಸಹಕಾರಿಗಳಾದ ಎಸ್.ಕೆ. ವೀರಪ್ಪ, ಕೆ.ಎ. ಮಂಜುನಾಥ, ಜಿ.ಎಂ. ಶಾಂತರಾಜ್, ಎಸ್.ಕೆ. ಶಿವಪ್ಪ ಹಾಗೂ ಇತರ ನೂರಾರು ಮಂದಿ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು. ಎಎಸ್ಐ ಶಿವಲಿಂಗ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಕೆ.ಪಿ. ಯಶೋಧ, ಎಸ್.ಜಿ. ಕುಸುಮ, ಎಸ್.ಎಸ್. ಗಣೇಶ್, ಕೆ.ಆರ್. ಲಕ್ಷ್ಮ ಶೆಟ್ಟಿ, ಎಸ್.ಜೆ. ರವಿಕುಮಾರ್, ಎ.ಟಿ. ಜಯರಾಂ, ಕೆ.ಎನ್. ಮಧುರ, ಎಂ.ಪಿ. ನಾಗೇಶ್, ಕೆ.ಪಿ. ನಿರಂಜನ್, ಕೆ.ಎಂ. ದೇವರಾಜ್, ಶನಿವಾರಸಂತೆ ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಹೆಚ್.ಎಂ. ರಘು, ಮೇಲ್ವಿಚಾರಕ ಹೆಚ್.ಟಿ. ನವೀನ್ ಹಾಗೂ ಸಂಘದ ನೌಕರರು ಹಾಜರಿದ್ದರು.