ಮಡಿಕೇರಿ, ನ.27: ನಗರದ ಬಿಳಿಗೇರಿ ಗ್ರಾಮ, ಬಕ್ಕಬಾಣೆ ಕಾಲೋನಿ ನಿವಾಸಿಯಾದ ಬಿ.ಕೆ.ಮೋಹನ್ ಅವರ ಪುತ್ರಿ ಹಾಗೂ ಪತ್ನಿ ಆಗಸ್ಟ್ 8 ರಂದು ಮನೆಯ ಪಕ್ಕದಲ್ಲಿದ್ದ ಹೊಳೆಯ ಬದಿಗೆ ಹೋದಾಗ ಆಕಸ್ಮಿಕವಾಗಿ ಹೊಳೆಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದರು. ಬಿ.ಕೆ.ಮೋಹನ್ ಇವರಿಗೆ 2 ಮಕ್ಕಳು ಹಾಗೂ ಒಬ್ಬ ಚಿಕ್ಕ ಗಂಡು ಮಗನಿದ್ದು, ಇವರು ಕೂಲಿಯಿಂದ ಜೀವನ ನಡೆಸುತ್ತಿದ್ದಾರೆ. ಯಾವುದೇ ರೀತಿಯ ಆದಾಯ ಇಲ್ಲದ ಕಾರಣ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಶಾಸಕ ಕೆ.ಜಿ.ಬೋಪಯ್ಯ ಅವರು ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ರೂ.2 ಲಕ್ಷ ಮಂಜೂರು ಮಾಡಿಸಿದ್ದರು. ಅದರಂತೆ ಶುಕ್ರವಾರ ನಗರದ ತಮ್ಮ ಕಚೇರಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಬಿ.ಕೆ.ಮೋಹನ್ ಅವರಿಗೆ 2 ಲಕ್ಷ ರೂ. ಚೆಕ್ ವಿತರಿಸಿದರು. ತಹಶೀಲ್ದಾರ್ ಮಹೇಶ್, ಇತರರು ಇದ್ದರು.