ಕುಶಾಲನಗರ, ನ. 27: ಕಾವೇರಿ ನದಿಯಲ್ಲಿ ಮದ್ಯ ಸೇವಿಸಿಕೊಂಡು ಮೋಜು ಮಸ್ತಿ ಮಾಡುತ್ತಿದ್ದ ಯುವಕರು ಪೆÇಲೀಸ್ ವಶವಾದ ಪ್ರಸಂಗ ಕುಶಾಲನಗರದಲ್ಲಿ ನಡೆದಿದೆ.

ಮೈಸೂರು ರಸ್ತೆಯ ಅರಣ್ಯ ತಪಾಸಣಾ ಗೇಟ್ ಬಳಿ ಸೇತುವೆಯ ಕೆಳಭಾಗದಲ್ಲಿ ಸಾರ್ವಜನಿಕವಾಗಿ ಮೂವರು ಸ್ಥಳೀಯ ಯುವಕರು ನದಿ ನಡುವೆ ಬಂಡೆಯಲ್ಲಿ ಮದ್ಯದ ಬಾಟಲಿಗಳೊಂದಿಗೆ ಬೆಳಿಗ್ಗೆ 11 ಗಂಟೆಗೆ ಮೋಜು ಮಾಡುತ್ತಿದ್ದ ವೇಳೆ ಇದನ್ನು ಕಂಡ ಗೇಟ್‍ನಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ರವಿ, ಪಟ್ಟಣ ಠಾಣೆಯ ಸಂದೀಪ್ ರೈ ಎಚ್ಚರಿಕೆ ನೀಡಿದರೂ ಯುವಕರು ತಮ್ಮ ಇಷ್ಟದಂತೆ ವರ್ತಿಸುತ್ತಿದ್ದ ಮಾಹಿತಿ ತಿಳಿದು ಸ್ಥಳಕ್ಕೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಬಂದು ಯುವಕರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಸ್ಥಳದಿಂದ ಬಾಟಲಿಗಳನ್ನು ಬಿಟ್ಟು ಪರಾರಿಯಾದ ಮೂವರಲ್ಲಿ ಇಬ್ಬರು ಪತ್ತೆಯಾಗಿ ಅವರ ಮೂಲಕ ನದಿಯಿಂದ ಬಾಟಲಿ ತ್ಯಾಜ್ಯಗಳನ್ನು ತೆರವುಗೊಳಿಸಿ ನಂತರ ಕುಶಾಲನಗರ ಪೆÇಲೀಸ್ ಠಾಣೆಗೆ ಒಪ್ಪಿಸಲಾಯಿತು.

ಠಾಣೆಯಲ್ಲಿ ತಪೆÇ್ಪಪ್ಪಿಕೊಂಡ ಯುವಕರನ್ನು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.