ಭಾಗಮಂಡಲ, ನ. 26: ಇಲ್ಲಿಗೆ ಸಮೀಪದ ಸಣ್ಣಪುಲಿಕೋಟು ಗ್ರಾಮದ ಕುಯ್ಯಮುಡಿ ಗಣೇಶ್ ಎಂಬವರ ತೋಟದಲ್ಲಿ ಎರಡು ದಿನಗಳಿಂದ ಕಂಡು ಬರುತ್ತಿದ್ದ ಆರು ವರ್ಷ ಪ್ರಾಯದ ಕಾಳಿಂಗ ಸರ್ಪವನ್ನು ಮೂರ್ನಾಡಿನ ಸ್ನೇಕ್ ಪ್ರಜ್ವಲ್‍ಕುಮಾರ್ ಸೆರೆ ಹಿಡಿದು ಬಳಿಕ ಅರಣ್ಯಕ್ಕೆ ಬಿಡಲಾಯಿತು.