ಸಿ.ಎನ್.ಸಿ ಸತತ 30 ವರ್ಷಗಳ ಕಾಲ ಹೋರಾಟ ನಡೆಸುತ್ತಿದೆ. ಇವರ ಹೋರಾಟಕ್ಕೆ ಬೆಂಬಲವಾಗಿ ಕನಿಷ್ಟ 1 ಮೂಟೆಯಷ್ಟು ಕಾಫಿಯಲ್ಲಿ ಬರುವ ಆದಾಯವನ್ನಾದರು ದೇಣಿಗೆಯಾಗಿ ನೀಡಿ

ಸಹಕರಿಸುವಂತೆ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ರಾಜ್ಯಸಭಾ ಸಂಸದ ಬಿ.ಕೆ ಹರಿಪ್ರಸಾದ್ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ಪ್ರಾರಂಭವಾದಾಗ 70 ಮಂದಿ ಸದಸ್ಯರನ್ನು ಹೊಂದಿತ್ತು. ಆರ್.ಎಸ್.ಎಸ್ ಪ್ರಾರಂಭದಲ್ಲಿ 90 ಮಂದಿ ಸೇರಿದ್ದರು. ಆದರೆ ಇವೆರಡು ಈಗ ಬಲಿಷ್ಠವಾಗಿ ಬೆಳೆದಿವೆ. ಅದೇ ರೀತಿ ಸಿ.ಎನ್.ಸಿ ಕೂಡ ಬೆಳೆಯಬೇಕಾದರೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು. ವೇದಿಕೆಯಲ್ಲಿ ಬಿಜೆಪಿ , ಕಾಂಗ್ರೆಸ್ ಪಕ್ಷದವರು ಹಾಜರಿದ್ದಾರೆ. ಈ ಪಕ್ಷ ರಹಿತ ಹೋರಾಟಕ್ಕೆ ತಾವು ಬೆಂಬಲ ಸೂಚಿಸುವುದಾಗಿ ಹೇಳಿದರು. ಕೊಡವರ ಭಾಷೆ ಸಂಸ್ಕøತಿ ಉಳಿಯಬೇಕಾದರೆ ಹೋರಾಟ ಅಗತ್ಯಕೊಡವ ಭಾಷೆ ಹಾಗೂ ಕೊಡವರ ಸಂಸ್ಕøತಿ ವಿಶಿಷ್ಠವಾದದ್ದು. ಇದು ಉಳಿಯಬೇಕಾದರೆ ಹೋರಾಟ ಅಗತ್ಯ. ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ಇನ್ನೂ ದೊರೆಯದೆ ಅಳಿವಿನಂಚಿನಲ್ಲಿದೆ.

(ಮೊದಲ ಪುಟದಿಂದ) ಹೋರಾಟ ನಡೆಯದೆ ಬುಡಕಟ್ಟು ಸ್ಥಾನಮಾನದಿಂದ ವಂಚಿತವಾದರೆ ಸುಮಾರು 2 ಲಕ್ಷ ಜನಸಂಖ್ಯೆ ಇರುವ ಕೊಡವ ಸಮುದಾಯ ಇತಿಹಾಸದ ಪುಟ ಸೇರಿಬಿಡುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದರು. ಕೊಡವ ಸಮುದಾಯದವರು ಸೇನೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶಸೇವೆಯಲ್ಲಿ ತೊಡಗಿರುವ ಇಂತಹ ಸಮುದಾಯದವರು ತಮ್ಮ ಹಕ್ಕನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಸಿ.ಎನ್.ಸಿ ಅಧ್ಯಕ್ಷ ನಾಚಪ್ಪ ಅವರ ನಾಯಕತ್ವದಲ್ಲಿ ಕೊಡವರಿಗೆ ಬುಡಕಟ್ಟು ಸ್ಥಾನಮಾನ ದೊರೆಯುವುದರ ಮೂಲಕ ಹೋರಾಟಕ್ಕೆ ಯಶಸ್ಸು ಸಿಗಲಿ ಎಂದು ಆಶಿಸಿದರು.