ಭಾಗಮಂಡಲ, ನ. 26 : ಇಲ್ಲಿನ ಶ್ರೀ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯ ಚೇರಂಬಾಣೆ ಶಾಖೆಯನ್ನು ಚೇರಂಬಾಣೆಯ ಅಂಚೆ ಕಚೇರಿ ಎದುರು ಇರುವ ಕೂಡಕಂಡಿ ರಾಘವಯ್ಯ ಅವರ ವಾಣಿಜ್ಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೋಡಿ ಕೆ. ಪೊನ್ನಪ್ಪ ಜ್ಯೋತಿ ಬೆಳಗಿ ಶಾಖೆಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಬಿ,ಎಂ. ಕಿಶೋರ್, ನಿರ್ದೇಶಕರಾದ ಪಿ.ಸಿ. ವಿಠಲ, ಬಿ.ಬಿ. ತಮ್ಮಯ್ಯ, ಡಿ.ಎನ್. ಹರ್ಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಎಸ್. ಬಿನ್ನಿ, ಭಾಗಮಂಡಲ ಹೋಬಳಿ ತೋಟಗಾರಿಕಾ ಅಧಿಕಾರಿ ಬಿ.ಡಿ. ವಸಂತ ಹಾಗೂ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು. ಶಾಖೆಯಲ್ಲಿ ರೈತರಿಗೆ ಅಗತ್ಯ ಕೃಷಿ ಉತ್ಪನ್ನಗಳು,ó ಪ್ಲಾಸ್ಟಿಕ್, ಟಾರ್ಪಲ್ ಮತ್ತು ಎಲ್ಲಾ ಕೃಷಿ ಪರಿಕರಗಳು ಲಭ್ಯವಿರುತ್ತವೆ ಎಂದು ಸಂಸ್ಥೆಯ ಅಧ್ಯಕ್ಷ ಕೋಡಿ ಕೆ. ಪೊನ್ನಪ್ಪ ಮಾಹಿತಿ ನೀಡಿದರು.