ಗೋಣಿಕೊಪ್ಪಲು, ನ. 26: ಶ್ರೀ ರಾಮಕೃಷ್ಣ ವಿದ್ಯಾಶಾಲೆ, ಮೈಸೂರು ಇದರ ಕೊಡಗು ಜಿಲ್ಲೆಯ ಹಳೆಯ ವಿದ್ಯಾರ್ಥಿಗಳ ಮಿಲನ ಕಾರ್ಯಕ್ರಮವು ತಾ. 28 ರಂದು ಬೆಳಿಗ್ಗೆ 9 ಗಂಟೆಗೆ ಸಿದ್ದಾಪುರದ ಇಂಜಿಲಗೆರೆ ಬಳಿಯ ಪುಲಿಯೇರಿ ಎಸ್ಟೇಟ್‍ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದವರು ಭಾಗವಹಿಸಲಿದ್ದಾರೆ ಎಂದು ಮೈಸೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ತಿಳಿಸಿದ್ದಾರೆ.