ಶನಿವಾರಸಂತೆ, ನ. 26: ಕೊಡ್ಲಿಪೇಟೆ ನಿವಾಸಿ ಪಿ.ಎಸ್. ಸುರೇಶ (59) ಜೀವನದಲ್ಲಿ ಜಿಗುಪ್ಸೆಗೊಂಡು ತಾ. 20 ರಂದು ಮನೆಯಲ್ಲಿ ಕಳೆನಾಶಕ ಸೇವಿಸಿದ್ದು, ಹಾಸನ ಮಂಗಳ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಫಲಕಾರಿಯಾಗದೆ ತಾ. 25 ರಂದು ಮೃತಪಟ್ಟಿದ್ದಾರೆ.
ಮಗಳು ಅಕ್ಷಿತಾ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣಾ ಹೆಡ್‍ಕಾನ್ಸ್‍ಟೇಬಲ್ ರವಿಚಂದ್ರ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.