ಮಡಿಕೇರಿ, ನ. 27: ಜಿಲ್ಲೆಯ ಸೋಮವಾರಪೇಟೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರುಯಶಸ್ವಿಯಾಗಿದ್ದಾರೆ.

ಜಿಲ್ಲೆಯಾದ್ಯಂತ ಮನೆಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳತನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಗಳಿಗೆ, ಪೊಲೀಸ್ ಅಧೀಕ್ಷಕರು ಸೂಕ್ತ ನಿರ್ದೇಶನಗಳನ್ನು ನೀಡಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಸೋಮವಾರಪೇಟೆ ಪೊಲೀಸರು ಮಡಿಕೇರಿ, ನ. 27: ಜಿಲ್ಲೆಯ ಸೋಮವಾರಪೇಟೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.ಜಿಲ್ಲೆಯಾದ್ಯಂತ ಮನೆಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳತನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಗಳಿಗೆ, ಪೊಲೀಸ್ ಅಧೀಕ್ಷಕರು ಸೂಕ್ತ ನಿರ್ದೇಶನಗಳನ್ನು ನೀಡಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಸೋಮವಾರಪೇಟೆ ಪೊಲೀಸರು ಆರೋಪಿಯಿಂದ 70,000 ರೂ. ನಗದು, ಹತ್ತು ಪ್ರಕರಣಕ್ಕೆ ಸಂಬಂಧಿಸಿ ದಂತೆ ಒಟ್ಟು 285 ಗ್ರಾಂ. ಚಿನ್ನಾಭರಣ ಗಳು ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಬೈಕ್ ಸೇರಿದಂತೆ ಒಟ್ಟು ರೂ. 13,35,000 ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಯು ಈ ಹಿಂದೆ ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲೂಕಿನ ಹೊಳೆ ಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿನ 8 ಮನೆಕಳವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜ ರಾಗದೇ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

(ಮೊದಲ ಪುಟದಿಂದ) ಪೊಲೀಸ್ ಅಧೀಕ್ಷಕಿ ಕ್ಷಮಾಮಿಶ್ರ ಹಾಗೂ ಉಪಾಧೀಕ್ಷಕ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಬಿ.ಜಿ., ಸೋಮವಾರಪೇಟೆ ಠಾಣಾ ಉಪ ನಿರೀಕ್ಷಕರಾದ ಎಂ.ಸಿ. ಶ್ರೀಧರ್, ವಿರೂಪಾಕ್ಷ, ಶನಿವಾರಸಂತೆ ಠಾಣಾ ಉಪನಿರೀಕ್ಷಕ ದೇವರಾಜು ಹೆಚ್.ಈ., ಶನಿವಾರಸಂತೆ ಠಾಣಾ ಸಿಬ್ಬಂದಿಗಳಾದ ಮುರಳಿ, ಲೋಕೇಶ್, ಹರೀಶ್, ಪ್ರದೀಪ್, ಡಿಂಪಲ್, ಸೋಮವಾರ ಪೇಟೆ ಠಾಣಾ ಸಿಬ್ಬಂದಿಗಳಾದ ಶಿವಕುಮಾರ್, ಪ್ರವೀಣ, ಅನಂತಕುಮಾರ್, ಮಂಜುನಾಥ, ಕುಮಾರಸ್ವಾಮಿ, ನಡಾಫ್, ಮಧು, (ಮೊದಲ ಪುಟದಿಂದ) ಪೊಲೀಸ್ ಅಧೀಕ್ಷಕಿ ಕ್ಷಮಾಮಿಶ್ರ ಹಾಗೂ ಉಪಾಧೀಕ್ಷಕ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಬಿ.ಜಿ., ಸೋಮವಾರಪೇಟೆ ಠಾಣಾ ಉಪ ನಿರೀಕ್ಷಕರಾದ ಎಂ.ಸಿ. ಶ್ರೀಧರ್, ವಿರೂಪಾಕ್ಷ, ಶನಿವಾರಸಂತೆ ಠಾಣಾ ಉಪನಿರೀಕ್ಷಕ ದೇವರಾಜು ಹೆಚ್.ಈ., ಶನಿವಾರಸಂತೆ ಠಾಣಾ ಸಿಬ್ಬಂದಿಗಳಾದ ಮುರಳಿ, ಲೋಕೇಶ್, ಹರೀಶ್, ಪ್ರದೀಪ್, ಡಿಂಪಲ್, ಸೋಮವಾರ ಪೇಟೆ ಠಾಣಾ ಸಿಬ್ಬಂದಿಗಳಾದ ಶಿವಕುಮಾರ್, ಪ್ರವೀಣ, ಅನಂತಕುಮಾರ್, ಮಂಜುನಾಥ, ಕುಮಾರಸ್ವಾಮಿ, ನಡಾಫ್, ಮಧು, ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್ ಅಧೀಕ್ಷಕರು ಕೋರಿದ್ದಾರೆ.