ಮಡಿಕೇರಿ, ನ. 25: ಪೊನ್ನಂಪೇಟೆ ಕೊಡವ ಸಮಾಜದ ಅಧೀನದಲ್ಲಿ ಆಕ್ಸ್‍ಸ್ಟೋಟ್ರ್ಸ್ ಮತ್ತು ಎಂಟರ್‍ಟೈನ್‍ಮೆಂಟ್ ವತಿಯಿಂದ ಇದೇ ಪ್ರಥಮ ಬಾರಿಗೆ ಪೊನ್ನಂಪೇಟೆಯಲ್ಲಿ ಏರ್ಪಡಿಸ ಲಾಗಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಹಾಗೂ ಫುಟ್ಬಾಲ್ ಪಂದ್ಯಾವಳಿ ತಾ. 27 ರಿಂದ (ನಾಳೆಯಿಂದ) ಆರಂಭಗೊಳ್ಳಲಿದೆ.ಫೈವ್ ‘ಎ’ ಸೈಡ್ ಹಾಕಿ (ರಿಂಕ್) ಹಾಗೂ ಫೈವ್ ‘ಎ’ ಸೈಡ್ ಫುಟ್ಬಾಲ್ ಮಡಿಕೇರಿ, ನ. 25: ಪೊನ್ನಂಪೇಟೆ ಕೊಡವ ಸಮಾಜದ ಅಧೀನದಲ್ಲಿ ಆಕ್ಸ್‍ಸ್ಟೋಟ್ರ್ಸ್ ಮತ್ತು ಎಂಟರ್‍ಟೈನ್‍ಮೆಂಟ್ ವತಿಯಿಂದ ಇದೇ ಪ್ರಥಮ ಬಾರಿಗೆ ಪೊನ್ನಂಪೇಟೆಯಲ್ಲಿ ಏರ್ಪಡಿಸ ಲಾಗಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಹಾಗೂ ಫುಟ್ಬಾಲ್ ಪಂದ್ಯಾವಳಿ ತಾ. 27 ರಿಂದ (ನಾಳೆಯಿಂದ) ಆರಂಭಗೊಳ್ಳಲಿದೆ.ಫೈವ್ ‘ಎ’ ಸೈಡ್ ಹಾಕಿ (ರಿಂಕ್) ಹಾಗೂ ಫೈವ್ ‘ಎ’ ಸೈಡ್ ಫುಟ್ಬಾಲ್ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ, (ಮೊದಲ ಪುಟದಿಂದ) ಮಾಜಿ ಒಲಂಪಿಯನ್ ಕರ್ನಲ್ ಬಾಳೆಯಡ ಸುಬ್ರಮಣಿ, ಜಿ.ಪಂ. ಸದಸ್ಯರಾದ ಚೀಯಕಪೂವಂಡ ಕೆ. ಬೋಪಣ್ಣ ಹಾಗೂ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಅವರು ಭಾಗವಹಿಸಲಿದ್ದಾರೆ.
ಹಾಕಿ ಪಂದ್ಯಾವಳಿಯಲ್ಲಿ 80 ಕುಟುಂಬಗಳು ಹಾಗೂ ಫುಟ್ಬಾಲ್ ಪಂದ್ಯಾವಳಿಯಲ್ಲಿ 52 ಕುಟುಂಬ ತಂಡಗಳು ಭಾಗವಹಿಸಲಿದೆ. ಆಕ್ಸ್‍ಸ್ಪೋಟ್ರ್ಸ್ ಅಂಡ್ ಎಂಟರ್‍ಟೈನ್‍ಮೆಂಟ್‍ನ ಈ ಪ್ರಯತ್ನಕ್ಕೆ ಹಾಕಿ ಕೂರ್ಗ್ ಸಂಸ್ಥೆ ತಾಂತ್ರಿಕವಾಗಿ ಸಹಕಾರ ನೀಡುತ್ತಿದೆ.