ಮಡಿಕೇರಿ, ನ. 25: ಬಸವನಹಳ್ಳಿ ಗ್ರಾಮದ ನಿವಾಸಿ ಮಲ್ಲಿಗೆ (35) ಅವರು ಕಾಣೆಯಾಗಿರುವುದಾಗಿ ಆಕೆಯ ಪತಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಟೋಬರ್ 20ರಂದು ಮನೆ ಬಿಟ್ಟು ಹೋದವರು ಇನ್ನೂ ಕೂಡ ಹಿಂತಿರುಗಲಿಲ್ಲ ಎಂದು ದೂರು ನೀಡಿದ್ದಾರೆ. ನಾಪತ್ತೆಯಾದ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆ ದೂ. 08276-278433 ಅನ್ನು ಸಂಪರ್ಕಿಸಲು ಕೋರಿದೆ.