ಮಡಿಕೇರಿ, ನ. 24: ತಾ.22 ರಂದು ನಗರದ ಗುಂಡುರಾವ್ ಬಡಾವಣೆಯ ಅಶೋಕ್ ಎಂಬವರ ಮನೆಯ ಸಮೀಪದ ಶೆಡ್ನಲ್ಲಿಯೇ ವಾಸಿಸುತ್ತಿದ್ದ ರಾಜುಪೂಜಾರಿ ಎಂಬವರು ಮೃತಪಟ್ಟಿದ್ದು ಮೃತರ ವಾರಸುದಾರರಿದ್ದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ರಾಜು ಪೂಜಾರಿಯವರು ಕಳೆದ 2 ವರ್ಷಗಳಿಂದ ಈ ಶೆಡ್ನಲ್ಲಿಯೇ ರಾತ್ರಿ ವೇಳೆ ಮಲಗುತ್ತಿದ್ದು ಅನಾರೋಗ್ಯದಿಂದ ಬಳಲುತ್ತಿದ್ದರು. ಇವರಿಗೆ ಅಂದಾಜು 70 ವರ್ಷ ಆಗಿದ್ದು, ಸಂಬಂಧಿಕರು ಯಾರಾದರು ಇದ್ದಲ್ಲಿ ಮಡಿಕೇರಿ ನಗರ ಠಾಣೆ ದೂ.08272-229333 ಸಂಪರ್ಕಿಸುವಂತೆ ಕೋರಿದೆ.