ಮಡಿಕೇರಿ, ನ. 24: ಹೊದ್ದೂರು ಗ್ರಾಮದ ವಾಟೆಕಾಡು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಪೋಷಣ ಅಭಿಯಾನ ಕಾರ್ಯಕ್ರಮ ಆಚರಿಸಲಾಯಿತು. ಇದರ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಆಟೋಟ ಸ್ಪರ್ಧೆಯನ್ನು ನಡೆಸಲಾಯಿತು. ನಂತರ ಬಾಲವಿಕಾಸ ಸಮಿತಿ ಅಧ್ಯಕ್ಷೆ ಸಮೀನ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಮುಖ್ಯ ಅತಿಥಿಯಾದ ಆರೋಗ್ಯ ಕಾರ್ಯಕರ್ತೆ ವೇದಾವತಿ ಅವರು ಗರ್ಭೀಣಿ ಮತ್ತು ಬಾಣಂತಿಯರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಾಗೂ ಚುಚ್ಚುಮದ್ದಿನ ಬಗ್ಗೆ ಸರಕಾರದಿಂದ ದೊರೆಯುವ ಸೌಲಭ್ಯದ ಬಗ್ಗೆ ವಿವರಿಸಿದರು. ಈ ಸಂದರ್ಭ ಎರಡು ಜನ ಗರ್ಭೀಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಮಾಡಲಾಯಿತು. ಅಂಗನವಾಡಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಪೊನ್ನಮ್ಮ, ಶೋಭಾ, ತುಳಸಿ, ಸುಮಾವತಿ ಮತ್ತು ಆಶಾ ಕಾರ್ಯಕರ್ತೆಯರಾದ ಹೆಚ್.ಡಿ. ರೂಪ ಮತ್ತು ಬಿ.ಆರ್. ಪ್ರೇಮ ತಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯದ ಬಗ್ಗೆ ಮತ್ತು ಕೊರೊನಾ ಬಗ್ಗೆ ವಿವರಿಸಿದರು. ಪೊನ್ನಮ್ಮ ಸ್ವಾಗತಿಸಿ, ಪ್ರೇಮ ಪ್ರಾರ್ಥಿಸಿ, ಸದಸ್ಯರಾದ ಸುಬ್ರಮಣಿ ಅವರು ನಿರೂಪಿಸಿ, ವಂದಿಸಿದರು.