*ಸಿದ್ದಾಪುರ, ನ.24: ನೆಲ್ಲಿಹುದಿಕೇರಿಯ ಶ್ರೀಮುತ್ತಪ್ಪ ದೇವಾಲಯದಲ್ಲಿ ತಾ.30 ರಂದು ಹುತ್ತರಿ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲಾಗುವುದು ಎಂದು ದೇವಾಲಯ ಸಮಿತಿ ಅಧ್ಯಕ್ಷ ಪಾಲಚಂಡ ಚೀಯಣ್ಣ ತಿಳಿಸಿದ್ದಾರೆ.
ಅಂದು ರಾತ್ರಿ 7.45 ಗಂಟೆಗೆ ನೆರೆ ಕಟ್ಟಿ, 8.45 ಕ್ಕೆ ಕದಿರು ತೆಗೆದು ಭಕ್ತಾದಿಗಳಿಗೆ ಹಂಚಲಾಗುವುದು. ಕೋವಿಡ್ ಹಿನ್ನೆಲೆ ಪ್ರತಿವರ್ಷದಂತೆ ಈ ಬಾರಿ ಮುತ್ತಪ್ಪ ವೆಳ್ಳಾಟಂ ಇರುವುದಿಲ್ಲವೆಂದು ಅವರು ಹೇಳಿದ್ದಾರೆ.