ಮಡಿಕೇರಿ, ನ. 24: ಅರಮೇರಿಯ ಮಾದಾಪಟ್ ಪರಂಬ್ ಮಂದ್‍ನಲ್ಲಿ ಸಿ.ಎನ್.ಸಿ. ವತಿಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ಬುಡಕಟ್ಟು ಕುಲ ಹಾಗೂ ಭೂ ರಾಜಕೀಯ ಸ್ವಾಯತ್ತತೆಯ ಕುರಿತು ಮಾತನಾಡಿದರು. ಪ್ರಮುಖರಾದ ಅಲ್ಮಂಡ ಪೂಣಚ್ಚ ಅವರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಊರಿನವರು ಭಾಗವಹಿಸಿ ಸಿ.ಎನ್.ಸಿ.ಯ ಹೋರಾಟಕ್ಕೆ ಬೆಂಬಲ ಸೂಚಿಸಿದರು.