ಸೋಮವಾರಪೇಟೆ, ನ. 24: ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ನಿಲುವಾಗಿಲು-ಬೆಸೂರು ಗ್ರಾಮದ ಶ್ರೀ ಬಾಲ ತ್ರಿಪುರ ಸುಂದರಿ ಅಮ್ಮನವರ ದೇವಾಲಯದ 8ನೇ ವರ್ಷದ ವಾರ್ಷಿಕ ಮಹೋತ್ಸವ ತಾ. 27 ರಂದು ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ನಿರ್ಮಲ ದರ್ಶನ, 8ಕ್ಕೆ ಮಂಗಳಾರತಿ, 10 ಗಂಟೆಗೆ ಗಣಹೋಮ, ಐಕ್ಯಮತ್ಯ ಹೋಮ, ಮಧ್ಯಾಹ್ನ 1ಕ್ಕೆ ಪ್ರಸಾದ ವಿನಿಯೋಗ, ರಾತ್ರಿ 7 ಗಂಟೆಗೆ ದೀಪಾರಾದನೆ ಹಾಗೂ ಮಹಾಮಂಗಳಾರತಿ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.