ಗೋಣಿಕೊಪ್ಪಲು, ನ. 24: ಮನೆಯಂಗಳದಲ್ಲಿನ ಹೂಕುಂಡದಲ್ಲಿ ಬೆಳೆದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿರುವ ಜಿಲ್ಲಾ ಅಪರಾಧ ಪತ್ತೆದಳದವರು ಈ ಸಂಬಂಧ ಪ್ರಕರಣ ದಾಖಲಾಗಿಸಿದ್ದಾರೆ.

ಗೋಣಿಕೊಪ್ಪಲಿನ ಪ್ರತಿಷ್ಠಿತ ಉದ್ಯಮಿಯೋರ್ವರ ಪುತ್ರ ಬೋಪಣ್ಣ ಎಂಬಾತ ತನ್ನ ಮನೆಯ ಹೂಕುಂಡದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ದಾಳಿ ನಡೆಸಿದ ಅಪರಾಧ ಪತ್ತೆದಳದವರು 4 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಬೋಪಣ್ಣ ಈ ಹಿಂದೆಯೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.