ಕೂಡಿಗೆ, ನ. 24: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದ ನಿವಾಸಿ ಪ್ರಭಾಕರ್ (45) ಎಂಬವರು ಸ್ನೇಹಿತನ ಬೈಕ್‍ನ ಹಿಂಬದಿಯಲ್ಲಿ ಕುಳಿತುಕೊಂಡು ಬರುತ್ತಿರುವಾಗ ಸೀಗೆಹೊಸೂರು ಗ್ರಾಮದ ಹತ್ತಿರ ಬಿದ್ದ ಪರಿಣಾಮವಾಗಿ ತಲೆ ಮತ್ತು ಬೆನ್ನಿಗೆ ತೀವ್ರವಾದ ಗಾಯವಾಗಿತ್ತು.

ಗಾಯಾಳುವನ್ನು ಮೈಸೂರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.