ಕೂಡಿಗೆ, ನ. 23: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂಪಿ ಅಪ್ಪಚ್ಚು ರಂಜನ್ ಭೇಟಿ ನೀಡಿ, ನೂತನವಾಗಿ ಹೆಚ್ಚುವರಿ ಕೊಠಡಿಯ ಕಟ್ಟಡ ಕಾಮಗಾರಿಯನ್ನು ವೀಕ್ಷಣೆ ನಡೆಸಿದರು.
ಈಗಾಗಲೇ ನಬಾರ್ಡ್ ನಿಂದ ಮುಂಜೂರಾಗಿರುವ ರೂ. 93 ಲಕ್ಷ ವೆಚ್ಚದ ನೂತನ ಐದು ಕೊಠಡಿಯ ಕಟ್ಟಡದ ಕಾಮಗಾರಿಯು ಶೇಕಡಾ 90 ರಷ್ಟು ಮುಗಿದಿದ್ದು, ಇದರ ಮಾಹಿತಿಯನ್ನು ಪಡೆದರು.
ಈ ಸಂದರ್ಭ ಕಾಲೇಜು ಸಮಿತಿ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಆರ್. ಮಂಜುಳ, ತಾಲೂಕು ಪಂಚಾಯತ್ ಸದಸ್ಯ ಗಣೇಶ್, ಒತ್ತುವರಿ ಸಮಿತಿಯ ಸದಸ್ಯ ಮಾಚಯ್ಯ, ಆರ್.ಎಂ.ಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಸಹಕಾರ ಸಂಘದ ನಿರ್ದೇಶಕ ಕೆ.ಕೆ. ಭೋಗಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಪ್ರಮೀಳಾ ಸೇರಿದಂತೆ ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲೆ ಕೆ.ಸಿ. ಕಾವೇರಮ್ಮ, ಹಿರಿಯ ಉಪನ್ಯಾಸಕರಾದ ನಾಗಪ್ಪ, ಸತೀಶ್, ರಮೇಶ್, ಹನುಮರಾಜ್, ಸುಸಿತಂಗಚ್ಚನ್ ಲೀನೆಟ್ಟು ಮೊದಲಾದವರು ಹಾಜರಿದ್ದರು.