ಮಡಿಕೇರಿ, ನ. 23: ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗಾಗಿ ಕಳೆದ 21 ವರ್ಷಗಳ ಬಳಿಕ, 2020ನೇ ಸಾಲಿನಲ್ಲಿ ರಾಷ್ಟ್ರಪತಿ ಪುರಸ್ಕಾರ ಲಭಿಸಿದ್ದಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

21 ವರ್ಷಗಳ ಹಿಂದೆ 1999ರಲ್ಲಿ ಎಎಸ್‍ಐ ಆಗಿ ಸೇವೆಯಲ್ಲಿದ್ದ ಅಚ್ಚುತನ್ ನಾಯರ್ ಅವರಿಗೆ ಪ್ರಥಮವಾಗಿ ಈ ಪುರಸ್ಕಾರ ಲಭಿಸಿತ್ತು. ಬಳಿಕ ಪ್ರಸ್ತುತ ಕುಶಾಲನಗರ ಡಿವೈಎಸ್ಪಿ ಹೆಚ್.ಎಂ. ಶೈಲೇಂದ್ರ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಅವರಿಬ್ಬರು ಈಚೆಗೆ ಈ ಪುರಸ್ಕಾರಕ್ಕೆ ಭಾಜನರಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.