ಮಡಿಕೇರಿ, ನ. 23: ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹತ್ತಿಕ್ಕುವ ಸಲುವಾಗಿ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಪುಲ್‍ಕುಮಾರ್ ಹೇಳಿದ್ದಾರೆ.ಮಡಿಕೇರಿಯಲ್ಲಿಂದು ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಎರಡು ದಿನಗಳ ಪ್ರವಾಸ ಹಮ್ಮಿ ಕೊಂಡಿದ್ದು, ಪರಿಶೀಲನೆ ಮಾಡ ಲಾಗಿದೆ. ಜಿಲ್ಲೆಯ ಗಡಿ ಭಾಗ ವೀರಾಜ ಪೇಟೆಯ ಕೆಲವು ಪ್ರದೇಶ ಗಳಿಗೆ ಪೊಲೀಸ್ ಅಧಿಕಾರಿಗಳು, ನಕ್ಸಲ್ ನಿಗ್ರಹ ಪಡೆ, ಕಂದಾಯ ಅಧಿಕಾರಿ ಗಳು, ಅರಣ್ಯ ಇಲಾಖಾಧಿ ಕಾರಿಗಳ ಸಹಿತ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿಗೆ ಇಲ್ಲದಿದ್ದರೂ ಮುಂದಕ್ಕೆ ಯಾವದೇ ರೀತಿಯ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಕ್ಸಲ್ ನಿಗ್ರಹ ದಳ ಸದಾ ಕಾರ್ಯೋ ನ್ಮುಖವಾಗಿ ಮಡಿಕೇರಿ, ನ. 23: ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹತ್ತಿಕ್ಕುವ ಸಲುವಾಗಿ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಪುಲ್‍ಕುಮಾರ್ ಹೇಳಿದ್ದಾರೆ.ಮಡಿಕೇರಿಯಲ್ಲಿಂದು ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಎರಡು ದಿನಗಳ ಪ್ರವಾಸ ಹಮ್ಮಿ ಕೊಂಡಿದ್ದು, ಪರಿಶೀಲನೆ ಮಾಡ ಲಾಗಿದೆ. ಜಿಲ್ಲೆಯ ಗಡಿ ಭಾಗ ವೀರಾಜ ಪೇಟೆಯ ಕೆಲವು ಪ್ರದೇಶ ಗಳಿಗೆ ಪೊಲೀಸ್ ಅಧಿಕಾರಿಗಳು, ನಕ್ಸಲ್ ನಿಗ್ರಹ ಪಡೆ, ಕಂದಾಯ ಅಧಿಕಾರಿ ಗಳು, ಅರಣ್ಯ ಇಲಾಖಾಧಿ ಕಾರಿಗಳ ಸಹಿತ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿಗೆ ಇಲ್ಲದಿದ್ದರೂ ಮುಂದಕ್ಕೆ ಯಾವದೇ ರೀತಿಯ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಕ್ಸಲ್ ನಿಗ್ರಹ ದಳ ಸದಾ ಕಾರ್ಯೋ ನ್ಮುಖವಾಗಿ ಮಡಿಕೇರಿ, ನ. 23: ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹತ್ತಿಕ್ಕುವ ಸಲುವಾಗಿ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಪುಲ್‍ಕುಮಾರ್ ಹೇಳಿದ್ದಾರೆ.

ಮಡಿಕೇರಿಯಲ್ಲಿಂದು ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಎರಡು ದಿನಗಳ ಪ್ರವಾಸ ಹಮ್ಮಿ ಕೊಂಡಿದ್ದು, ಪರಿಶೀಲನೆ ಮಾಡ ಲಾಗಿದೆ. ಜಿಲ್ಲೆಯ ಗಡಿ ಭಾಗ ವೀರಾಜ ಪೇಟೆಯ ಕೆಲವು ಪ್ರದೇಶ ಗಳಿಗೆ ಪೊಲೀಸ್ ಅಧಿಕಾರಿಗಳು, ನಕ್ಸಲ್ ನಿಗ್ರಹ ಪಡೆ, ಕಂದಾಯ ಅಧಿಕಾರಿ ಗಳು, ಅರಣ್ಯ ಇಲಾಖಾಧಿ ಕಾರಿಗಳ ಸಹಿತ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿಗೆ ಇಲ್ಲದಿದ್ದರೂ ಮುಂದಕ್ಕೆ ಯಾವದೇ ರೀತಿಯ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಕ್ಸಲ್ ನಿಗ್ರಹ ದಳ ಸದಾ ಕಾರ್ಯೋ ನ್ಮುಖವಾಗಿ ಕೋವಿಡ್ ಜಾಗೃತಿ

ಜಿಲ್ಲೆಯ ಜನತೆ ಕೋವಿಡ್ ವಿರುದ್ಧ

(ಮೊದಲ ಪುಟದಿಂದ) ಶಿಸ್ತಿನಿಂದ ಹೋರಾಡಿ ಸೋಂಕು ಇಳಿಮುಖವಾಗುವಲ್ಲಿ ಸಹಕರಿಸಿದ್ದಾರೆ. ಪೊಲೀಸ್ ಇಲಾಖೆ ಸೇರಿದಂತೆ ವೈದ್ಯಕೀಯ ಇತರ ಇಲಾಖೆಯವರು, ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಅವರುಗಳಿಗೆ ಧನ್ಯವಾದ ಹೇಳುವ ಸಲುವಾಗಿ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಇಂದು ಇಲಾಖೆ ವತಿಯಿಂದ ವಾಹನ ಜಾಥಾ ಹಮ್ಮಿಕೊಂಡಿರುದಾಗಿ ತಿಳಿಸಿದರು.

ವಾಹನ ಜಾಗೃತಿ ಜಾಥಾ

ಇದೇ ಸಂದರ್ಭದಲ್ಲಿ ಕೋವಿಡ್ ಹಾಗೂ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತಾಗಿ ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು. ವಾಹನಗಳಲ್ಲಿ ಜಾಗೃತಿ ಫಲಕ ಹಾಗೂ ಧ್ವನಿ ಸಂದೇಶದ ಮೂಲಕ ಸಾಗಿದ ಜಾಥಾಗೆ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಪುಲ್‍ಕುಮಾರ್ ಚಾಲನೆ ನೀಡಿದರು. ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಡಿವೈಎಸ್‍ಪಿಗಳಾದ ದಿನೇಶ್‍ಕುಮಾರ್, ಶೈಲೇಂದ್ರ, ವೃತ್ತ ನಿರೀಕ್ಷಕರುಗಳಾದ ಮೇದಪ್ಪ, ಅನೂಪ್ ಮಾದಪ್ಪ, ರಾಚಯ್ಯ, ನಗರ, ಗ್ರಾಮಾಂತರ, ಸಂಚಾರಿ ಠಾಣಾಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವೀರಾಜಪೇಟೆ : ರಾಜ್ಯದ ಗಡಿಗಳಲ್ಲಿ ಕಾನೂನು ಬಾಹಿರ ಕೃತ್ಯ ಸೇರಿದಂತೆ ಎಲ್ಲಾ ಅಪರಾಧಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಬದ್ಧವಿದ್ದು, ಸಾರ್ವಜನಿಕರು ಅಪರಾಧ ತಡೆಗೆ ಇಲಾಖೆಯೊಂದಿಗೆ ಕೈಜೋಡಿಸುವಂತೆ ಐಜಿ ವಿಫುಲ್‍ಕುಮಾರ್ ಕರೆ ನೀಡಿದ್ದಾರೆ. ಸಾರ್ವಜನಿಕರು, ಪೊಲೀಸ್ ಇಲಾಖೆಯೊಂದಿಗೆ ಪರಸ್ಪರ ಸಹಕರಿಸಿದರೆ ಪೊಲೀಸರ ಕರ್ತವ್ಯ ನಿಷ್ಠೆ ಹಾಗೂ ಸೇವಾ ಬದ್ಧತೆಗೆ ಕಾರಣವಾಗಲಿದೆ. ಕಾನೂನು ಸುವ್ಯವಸ್ಥೆಯೊಂದಿಗೆ ಪ್ರತಿಯೊಬ್ಬರ ಸುರಕ್ಷತೆ ಕಾಪಾಡಲು ಪೊಲೀಸರ ಸೇವೆಯೂ ಪ್ರಮುಖವಾಗಿದೆ ಎಂದು ಐ.ಜಿ. ವಿಪುಲ್ ಕುಮಾರ್ ಹೇಳಿದರು.

ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆ ವತಿಯಿಂದ ನಗರ ಪೊಲೀಸ್ ಠಾಣೆಯ ಮುಂದಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಯಾವುದೇ ಒಂದು ಸ್ಥಳದಲ್ಲಿ ಕಳ್ಳತನವಾದಾಗ ಕಳ್ಳನನ್ನು ಹಿಡಿಯಲು ಪೊಲೀಸರಷ್ಟೇ ಸಾರ್ವಜನಿಕರು ಅಧಿಕಾರವನ್ನು ಹೊಂದಿರುತ್ತಾರೆ. ಇತರ ಆಯ್ದ ಅಪರಾಧಗಳ ಪತ್ತೆಗೂ ಇದು ಅನ್ವಯವಾಗಲಿದೆ. ಉತ್ತಮ ಸಮಾಜದ ನಿರ್ಮಾಣದಲ್ಲಿ ಸಾರ್ವಜನಿಕರೊಂದಿಗೆ ಪೊಲೀಸರ ಸೇವೆಯೂ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು.

ವೀರಾಜಪೇಟೆಯಲ್ಲಿ ರಾತ್ರಿ ವೇಳೆ ನಡೆಯುವ ಅಪರಾಧಗಳನ್ನು ಪತ್ತೆ ಹಚ್ಚಲು ಪಟ್ಟಣದ ಆಯ್ದ ಭಾಗಗಳಲ್ಲಿ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕ್ಯಾಮರಾ ಅಳವಡಿಸಲು ಸಾರ್ವಜನಿಕರು ಉದಾರವಾಗಿ ಸಹಕರಿಸಬೇಕು. ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಚಾರದ ಸಂಖ್ಯೆ ಅಧಿಕವಾಗುತ್ತಿದ್ದು ಟ್ರಾಫಿಕ್ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂಬ ಸಾರ್ವಜನಿಕರ ದೂರಿಗೆ ಇದನ್ನು ಕೂಲಂಕುಷವಾಗಿ ಪರಿಶೀಲಿಸಿ ಬಗೆಹರಿಸಲಾಗುವುದು ಎಂದು ವಿಪುಲ್ ಕುಮಾರ್ ತಿಳಿಸಿದರು.

ಕೊಡಗು ಕೇರಳ ಗಡಿ ಪ್ರದೇಶ ಮಾಕುಟ್ಟದಲ್ಲಿ ವಾಹನಗಳಿಗೆ ಅಪರಾಧದ ನೆಪದಲ್ಲಿ ಗಡಿ ಭಾಗಕ್ಕೆ ಬಂದು ಕಾನೂನು ಬಾಹಿರವಾಗಿ ದಂಡ ವಿಧಿಸುತ್ತಿದ್ದಾರೆ. ಇದು ಕ್ರಮ ಬದ್ಧವಲ್ಲ. ವಾಹನಗಳು ಅಪರಾಧವೆಸಗಿದರೆ ಕರ್ನಾಟಕ ಪೊಲೀಸರೇ ಅದನ್ನು ನಿಯಂತ್ರಿಸಿ ದಂಡ ವಿಧಿಸಬೇಕು ಎಂದು ಸಾರ್ವಜನಿಕರು ದೂರಿದರು. ಈ ಸಂಬಂಧ ಕೇರಳದ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಐಜಿ ಭರವಸೆ ನೀಡಿದರು.

ಕೊಡಗು ಕೇರಳ ಗಡಿಭಾಗಗಳನ್ನು ಲೋಕೋಪಯೋಗಿ ಇಲಾಖೆಯಿಂದ ಗುರುತಿಸಿ ನಾಮಫಲಕವನ್ನು ಅಳವಡಿಸಲಾಗಿದೆ. ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ತಮಿಳುನಾಡು, ಕೇರಳದ ಗಡಿಭಾಗಗಳಲ್ಲಿ ಟ್ರೈ ಜಂಕ್ಷನ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಅಮ್ಮತ್ತಿ ಪೊಲೀಸ್ ಔಟ್‍ಪೋಸ್ಟ್ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಹೊಸ ಕಟ್ಟಡ ನಿರ್ಮಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಸಾರ್ವಜನಿಕ ಸಂಪರ್ಕ ಸಭೆಯ ನಂತರ ರಾತ್ರಿ 8-30ಗಂಟೆಗೆ ವಿಪುಲ್ ಕುಮಾರ್ ಅವರು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಕ್ಷಮಮಿಶ್ರಾ ಅವರ ಸಮ್ಮುಖದಲ್ಲಿ, ಸಮುಚ್ಚಯ ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಕೆಲ ಕಾಲ ವಿಚಾರವಿನಿಮಯ ಮಾಡಿದರು.

ಸಾರ್ವಜನಿಕ ಪೊಲೀಸ್ ಸಂಪರ್ಕ ಸಭೆಯಲ್ಲಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಸಾರ್ವಜನಿಕ ಪ್ರಮುಖರು, ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಕೆಲ ಸದಸ್ಯರುಗಳು, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ, ಸಬ್‍ಇನ್ಸ್‍ಪೆಕ್ಟರ್‍ಗಳಾದ ಬೋಜಪ್ಪ, ಜಗದೀಶ್, ಸಿದ್ಧಲಿಂಗ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.