ಮಡಿಕೇರಿ, ನ.23 : ಮಡಿಕೇರಿ ತಾಲೂಕಿನ ನರಿಯಂದಡ ಗ್ರಾ.ಪಂ ವ್ಯಾಪ್ತಿಯಲ್ಲಿ ರೂ.25 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು ಚಾಲನೆ ನೀಡಿದರು.

ಅರಪಟ್ಟು ಗ್ರಾಮದ ಕೋಡಿರ ಕುಟುಂಬಸ್ಥರ ಅಂಬಲ, ಅರೆಪಟ್ಟು ಗ್ರಾಮಕ್ಕಾಗಿ ಬರುವ ಪಾಂಡಂಡ ಐನ್ ಮನೆಗೆ ಹೋಗುವ ರಸ್ತೆ, ಎಡಪಾಲ, ಎರಟೆಯಂಡ ಕುಟುಂಬಸ್ಥರು ಹಾಗೂ ಸಾರ್ವಜನಿಕರು ತೆರಳುವ ರಸ್ತೆ ಡಾಂಬರೀಕರಣ, ಎಡಪಾಲ ಗ್ರಾಮದ ಕುಪ್ಪೊಡಂಡ ಈ.ಮೊಹಮ್ಮದ್ ಅವರ ಮನೆಯ ರಸ್ತೆಗೆ ತಡೆಗೋಡೆ, ಕಂಡಕೇರಿಯಿಂದ ತೆಂಚಬಾಣೆ ರಸ್ತೆ ಅಭಿವೃದ್ಧಿ, ಕೋಕೇರಿ ಗ್ರಾಮದ ಬಿದ್ದಂಡ ಐನ್ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ, ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಕೋಡಿರ ಕೊಪ್ಪ ಮನೆ ರಸ್ತೆಗೆ ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ಪ್ರಮುಖರಾದ ನರಿಯಂದಡ ವಲಯ ಕಾಂಗ್ರೆಸ್ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಕಾಂಗ್ರೆಸ್ ಮಾಜಿ ವಲಯಾಧ್ಯಕ್ಷ ನಂಬಿಯಪಂಡ ಮಣಿ ಅಯ್ಯಮ್ಮ ಹಾಗೂ ಇತರರು ಹಾಜರಿದ್ದರು.