ನಾಪೆÇೀಕ್ಲು, ನ. 22: 2021ರ ಫೆಬ್ರವರಿ 17 ರಂದು ಬೆಳಿಗ್ಗೆ 8.25 ರಿಂದ 10.20 ರ ನಡುವೆ ಮೀನಾ ರಾಶಿಯಲ್ಲಿ ಶಾಸ್ತಾವೇಶ್ವರ ದೇವಾಲ ಯದ ಪುನರ್ ಪ್ರತಿಷ್ಠೆ ನಡೆಯಲಿದೆ ಎಂದು ಪಯ್ಯನೂರಿನ ಜ್ಯೋತಿ ಸದನಂ ಮಾಧವನ್ ಪುದುವಾಳ್ ತಿಳಿಸಿದರು.
ದೇವಳದಲ್ಲಿ ತಕ್ಕಮುಖ್ಯಸ್ಥರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಅವರು ಈ ವಿಷಯ ತಿಳಿಸಿದರು.
ಪುರಾತನವಾದ ಈ ದೇವಾಲಯದ ಕಟ್ಟಡ ಶಿಥಿಲಾವಸ್ಥೆ ತಲುಪಿದ ಕಾರಣ ತಕ್ಕಮುಖ್ಯಸ್ಥರು, ಗ್ರಾಮಸ್ಥರು ದೇವಾಲಯದ ಜೀರ್ಣೋದ್ಧಾರ ನಡೆಸಲು ಕ್ರಮಕೈಗೊಂಡರು. ಅದರಂತೆ ಬೆಂಗಳೂರಿನ ಉದ್ಯಮಿ ರಾಜೇಂದ್ರ ಅವರ ನೇತೃತ್ವದಲ್ಲಿ ಸುಮಾರು 1.5 ಕೋಟಿ ರೂ. ವೆಚ್ಚದ ಕಾಮಗಾರಿ ಬರದಿಂದ ಸಾಗುತ್ತಿದೆ. ಗರ್ಭಗುಡಿ, ಪೌಳಿ, ಅರ್ಚಕರ ನಿವಾಸ ಮತ್ತಿತರ ಕಾಮಗಾರಿಗಳು ಪೂರ್ಣಗೊಂಡಿದ್ದು, ಅಂತಿಮ ಹಂತದ ಕೆಲಸ ಕಾರ್ಯಗಳು ಸದ್ಯದಲ್ಲಿಯೇ ಪೂರ್ಣಗೊಳ್ಳಲಿವೆ.
ಪ್ರತೀ ವರ್ಷ ಫೆ. 17ಕ್ಕೆ ಇಲ್ಲಿ ವಾರ್ಷಿಕ ಉತ್ಸವ ನಡೆಯಲಿದೆ. ಈ ಬಾರಿ ಪುನರ್ ಪ್ರತಿಷ್ಠೆಯೊಂದಿಗೆ ವಾರ್ಷಿಕ ಉತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ತಂತ್ರಿ ಮಹೇಶ್ ಮುನಿಯಂಗಳ್, ಶಿಲ್ಪಿ ಶಂಕರನ್ ನಂಬೋದರಿ ಪಾಡ್, ಉದ್ಯಮಿ ರಾಜೇಂದ್ರ, ತಕ್ಕಮುಖ್ಯಸ್ಥರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಭಕ್ತಾದಿಗಳು ಇದ್ದರು.