ಕುಶಾಲನಗರ, ನ. 22: ಕುಶಾಲನಗರ ಗಣಪತಿ ದೇವಾಲಯದ ಗೋಪುರ ಕುಂಭಾಭಿಷೇಕದ 12ನೇ ವಾರ್ಷಿಕೋತ್ಸವ ನಡೆಯಿತು. ಗಣಪತಿ ದೇವಾಲಯದಲ್ಲಿ ಹೋಮ, ಹವನ, ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ಕಾರ್ತಿಕ ಮಾಸದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಪ್ರಧಾನ ಅರ್ಚಕರಾದ ಆರ್.ಕೆ ನಾಗೇಂದ್ರ ಅವರ ನೇತೃತ್ವದಲ್ಲಿ ರಾಘವೇಂದ್ರ ಭಟ್, ಕೃಷ್ಣಮೂರ್ತಿ ಭಟ್, ಸುಬ್ರಮಣ್ಯ ಭಟ್, ಜಗದೀಶ್ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ವಿ.ಎನ್ ವಸಂತ ಕುಮಾರ್ ಕೋವಿಡ್ 19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಗಣಪತಿ ದೇವಾಲಯದ ರಥೋತ್ಸವ, 100ನೇ ಗೋ ಪ್ರದರ್ಶನ ಮತ್ತು ಜಾತ್ರೆ ಕಾರ್ಯಕ್ರಮ ಸಂದರ್ಭ ಧಾರ್ಮಿಕ ಕಾರ್ಯಕ್ರಮಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಭಕ್ತಾಧಿಗಳು ಸಹಕರಿಸುವಂತೆ ಕೋರಿದ್ದಾರೆ.

ಈ ಸಂದರ್ಭ ದೇವಾಲಯ ಸಮಿತಿಯ ಗೌರವ ಕಾರ್ಯದರ್ಶಿ ಶ್ರೀನಿವಾಸ ರಾವ್, ಖಜಾಂಚಿ ಎಂ.ಕೆ ದಿನೇಶ್, ನಿರ್ದೇಶಕರುಗಳು ಇದ್ದರು.