ಕರಿಕೆ, ನ. 22: ಇಲ್ಲಿನ ಸ.ಹಿ.ಪ್ರಾ. ಶಾಲೆ ಕರಿಕೆ ಕಾಲೋನಿ ಹಾಗೂ ಸರಕಾರಿ ಗಿರಿಜನರ ಆಶ್ರಮ ಶಾಲೆ ಕರಿಕೆ ಇವರ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ‘ಕೊರೋನಾ ಮತ್ತು ಅದರ ದುಷ್ಪರಿಣಾಮಗಳು’ ಎಂಬ ವಿಷಯದ ಮೇಲೆ ಆನ್‍ಲೈನ್ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಏಳನೆಯ ತರಗತಿ ವಿದ್ಯಾರ್ಥಿ ಸ್ವರೂಪ್ ಆರ್. ಪ್ರಥಮ ಹಾಗೂ ಪೂಜಾ ಬಿ.ಎನ್. ದ್ವಿತೀಯ ಬಹುಮಾನ ಗಳಿಸಿದರು. ವಿಜೇತರಿಗೆ ಶಾಲೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣನಾಯ್ಕ ಕೆ.ಸಿ., ಶಾಲಾ ಮುಖ್ಯ ಶಿಕ್ಷಕ ಕುಮಾರ್ ಎನ್.ಎಸ್, ಆಶ್ರಮ ಶಾಲೆ ಮುಖ್ಯ ಶಿಕ್ಷಕ ಬರಮಪ್ಪ ಪಾಶಗಾರ, ಶಿಕ್ಷಕಿ ಮಹಾಲಕ್ಷ್ಮಿ ಹಾಗೂ ಪೆÇೀಷಕ ನವೀನ್ ಬೇಕಲ್ ಉಪಸ್ಥಿತರಿದ್ದರು.