ಕೂಡಿಗೆ, ನ. 22: ಹಿಂದಿನ ಕಾರ್ಪೋರೇಷನ್ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆಯಿಂದ ಕೂಡಿಗೆಯಲ್ಲಿ ಕೋವಿಡ್ ಅರಿವು ಜಾಥಾ ಜನಾಂದೋಲನ ಕಾರ್ಯಕ್ರಮ ನಡೆಯಿತು. ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯ ನಿರ್ದೇಶನದಂತೆ ಡಾ. ತುಂಗಾ ಎಂ. ನಾಥ್ (ವೈದ್ಯಾಧಿಕಾರಿಗಳು) ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡಿಗೆ ಇವರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಸಂಸ್ಥೆ ನಿರ್ದೇಶಕ ಡಾ. ಜಿ. ಸುರೇಶ್, ಸಿಬ್ಬಂದಿಗಳಾದ ಸಲಾವುದ್ದೀನ್, ಹರೀಶ್, ತರಬೇತುದಾರ ಲೋಕೇಶ್ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.