ಮಡಿಕೇರಿ, ನ. 22 : ಕರ್ನಾಟಕ ರಾಜ್ಯದಲ್ಲಿ ಪ್ರಭಾವಶಾಲಿಯಾಗಿರುವ ಕನ್ನಡ ಸಾಹಿತ್ಯ ಪರಿಷತ್‍ನ ಪ್ರಸಕ್ತ ಅವಧಿಯ ಅಧಿಕಾರ ಮುಕ್ತಾಯಗೊಳ್ಳುವತ್ತ ಸಾಗುತ್ತಿದೆ. ಸದ್ಯದ ಮಟ್ಟಿಗೆ ಇನ್ನೂ ಸುಮಾರು ನಾಲ್ಕು ತಿಂಗಳ ಅಧಿಕಾರಾವಧಿಯನ್ನು ಈಗಿರುವ ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯ ಸಮಿತಿ ಸೇರಿದಂತೆ ಜಿಲ್ಲಾ ಘಟಕಗಳು ಹೊಂದಿವೆಯಾದರೂ ಮುಂದಿನ ಸಾಲಿನ ಆಡಳಿತಕ್ಕಾಗಿ ಈಗಿನಿಂದಲೇ ಪ್ರಯತ್ನಗಳು ಶುರುವಾದಂತಿವೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಆಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಗೆ 2016ರಲ್ಲಿ ಚುನಾವಣೆ ನಡೆದಿದ್ದು, ಹಾಲಿ ಅಧಿಕಾರದಲ್ಲಿರುವ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡಿದ್ದರು. ಈತನಕ ಕನ್ನಡ ಸಾಹಿತ್ಯ ಪರಿಷತ್‍ನ ಅಧಿಕಾರಾವಧಿ ಮೂರು ವರ್ಷಗಳಿಗೆ ಸೀಮಿತವಾಗಿತ್ತಾದರೂ ಹಾಲಿ ಅಧಿಕಾರದಲ್ಲಿರುವ ಸಮಿತಿ ಇದನ್ನು ಬದಲಾವಣೆ ಮಾಡುವ ನಿರ್ಧಾರಕ್ಕೆ ಬಂದು ಅಧಿಕಾರಾವಧಿಯನ್ನು ಐದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಿತ್ತು. ಈ ತೀರ್ಮಾನವನ್ನು ವಿರೋಧಿಸಿ ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಿದರಾದರೂ ಅದು ಸೂಕ್ತ ರೀತಿಯಲ್ಲಿ ಯಶಸ್ಸು ಕಾಣದೆ ಸರ್ವ ಸದಸ್ಯರ ಸಮಿತಿ ಕೈಗೊಂಡ ತೀರ್ಮಾನದಂತೆ ಅವಧಿ 5 ವರ್ಷಗಳಿಗೆ ಮುಂದುವರಿಯಿತು. ಇದೀಗ 2021ರ ಮಾರ್ಚ್ 3ಕ್ಕೆ ಈಗಿರುವ ಆಡಳಿತ ಮಂಡಳಿಯ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಅವಧಿ ಮುಕ್ತಾಯದ ಹಂತದತ್ತ ತಲುಪುತ್ತಿರುವಂತೆ ಇದೀಗ ಮುಂದಿನ ಸಾಲಿನ ಅಧಿಕಾರಕ್ಕಾಗಿ ಈಗಿನಿಂದಲೇ ಪ್ರಯತ್ನಗಳು ಕಂಡುಬರುತ್ತಿವೆ.ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲೋಕೇಶ್‍ಸಾಗರ್ ಹಾಗೂ ಬಿ.ಎ. ಷಂಶುದ್ದೀನ್ ನಡುವೆ ಭಾರೀ ಸ್ಪರ್ಧೆ ಕಂಡು ಬಂದಿತ್ತಾದರೂ ಅಂತಿಮವಾಗಿ ಲೋಕೇಶ್ ಸಾಗರ್ ಅಧ್ಯಕ್ಷರಾಗಿ ಆಯ್ಕೆ ಗೊಂಡಿದ್ದರು. ತಾಲೂಕು ಘಟಕಗಳ ಅಧ್ಯಕ್ಷ ಸ್ಥಾನ ಚುನಾವಣೆಯ ಬದಲಿಗೆ ಜಿಲ್ಲಾ ಸಮಿತಿಯ ತೀರ್ಮಾನದಂತೆ ನೇಮಕಾತಿಯಾಗಿದ್ದು, ಮಡಿಕೇರಿ ತಾಲೂಕು ಸಮಿತಿ ಅಧ್ಯಕ್ಷರಾಗಿ ಕುಡೆಕಲ್ ಸಂತೋಷ್, ವೀರಾಜಪೇಟೆ ತಾಲೂಕಿಗೆ ಮಧೋಶ್ ಪೂವಯ್ಯ ಹಾಗೂ ಮಡಿಕೇರಿ, ನ. 22 : ಕರ್ನಾಟಕ ರಾಜ್ಯದಲ್ಲಿ ಪ್ರಭಾವಶಾಲಿಯಾಗಿರುವ ಕನ್ನಡ ಸಾಹಿತ್ಯ ಪರಿಷತ್‍ನ ಪ್ರಸಕ್ತ ಅವಧಿಯ ಅಧಿಕಾರ ಮುಕ್ತಾಯಗೊಳ್ಳುವತ್ತ ಸಾಗುತ್ತಿದೆ. ಸದ್ಯದ ಮಟ್ಟಿಗೆ ಇನ್ನೂ ಸುಮಾರು ನಾಲ್ಕು ತಿಂಗಳ ಅಧಿಕಾರಾವಧಿಯನ್ನು ಈಗಿರುವ ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯ ಸಮಿತಿ ಸೇರಿದಂತೆ ಜಿಲ್ಲಾ ಘಟಕಗಳು ಹೊಂದಿವೆಯಾದರೂ ಮುಂದಿನ ಸಾಲಿನ ಆಡಳಿತಕ್ಕಾಗಿ ಈಗಿನಿಂದಲೇ ಪ್ರಯತ್ನಗಳು ಶುರುವಾದಂತಿವೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಆಯಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಗೆ 2016ರಲ್ಲಿ ಚುನಾವಣೆ ನಡೆದಿದ್ದು, ಹಾಲಿ ಅಧಿಕಾರದಲ್ಲಿರುವ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡಿದ್ದರು. ಈತನಕ ಕನ್ನಡ ಸಾಹಿತ್ಯ ಪರಿಷತ್‍ನ ಅಧಿಕಾರಾವಧಿ ಮೂರು ವರ್ಷಗಳಿಗೆ ಸೀಮಿತವಾಗಿತ್ತಾದರೂ ಹಾಲಿ ಅಧಿಕಾರದಲ್ಲಿರುವ ಸಮಿತಿ ಇದನ್ನು ಬದಲಾವಣೆ ಮಾಡುವ ನಿರ್ಧಾರಕ್ಕೆ ಬಂದು ಅಧಿಕಾರಾವಧಿಯನ್ನು ಐದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಿತ್ತು. ಈ ತೀರ್ಮಾನವನ್ನು ವಿರೋಧಿಸಿ ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಿದರಾದರೂ ಅದು ಸೂಕ್ತ ರೀತಿಯಲ್ಲಿ ಯಶಸ್ಸು ಕಾಣದೆ ಸರ್ವ ಸದಸ್ಯರ ಸಮಿತಿ ಕೈಗೊಂಡ ತೀರ್ಮಾನದಂತೆ ಅವಧಿ 5 ವರ್ಷಗಳಿಗೆ ಮುಂದುವರಿಯಿತು. ಇದೀಗ 2021ರ ಮಾರ್ಚ್ 3ಕ್ಕೆ ಈಗಿರುವ ಆಡಳಿತ ಮಂಡಳಿಯ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಅವಧಿ ಮುಕ್ತಾಯದ ಹಂತದತ್ತ ತಲುಪುತ್ತಿರುವಂತೆ ಇದೀಗ ಮುಂದಿನ ಸಾಲಿನ ಅಧಿಕಾರಕ್ಕಾಗಿ ಈಗಿನಿಂದಲೇ ಪ್ರಯತ್ನಗಳು ಕಂಡುಬರುತ್ತಿವೆ.

ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲೋಕೇಶ್‍ಸಾಗರ್ ಹಾಗೂ ಬಿ.ಎ. ಷಂಶುದ್ದೀನ್ ನಡುವೆ ಭಾರೀ ಸ್ಪರ್ಧೆ ಕಂಡು ಬಂದಿತ್ತಾದರೂ ಅಂತಿಮವಾಗಿ ಲೋಕೇಶ್ ಸಾಗರ್ ಅಧ್ಯಕ್ಷರಾಗಿ ಆಯ್ಕೆ ಗೊಂಡಿದ್ದರು. ತಾಲೂಕು ಘಟಕಗಳ ಅಧ್ಯಕ್ಷ ಸ್ಥಾನ ಚುನಾವಣೆಯ ಬದಲಿಗೆ ಜಿಲ್ಲಾ ಸಮಿತಿಯ ತೀರ್ಮಾನದಂತೆ ನೇಮಕಾತಿಯಾಗಿದ್ದು, ಮಡಿಕೇರಿ ತಾಲೂಕು ಸಮಿತಿ ಅಧ್ಯಕ್ಷರಾಗಿ ಕುಡೆಕಲ್ ಸಂತೋಷ್, ವೀರಾಜಪೇಟೆ ತಾಲೂಕಿಗೆ ಮಧೋಶ್ ಪೂವಯ್ಯ ಹಾಗೂ ಈ ಬಗ್ಗೆ `ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಕೇಶವಕಾಮತ್ ಅವರು ತಾವು ಆಕಾಂಕ್ಷಿಯಾಗಿರುವದನ್ನು ಖಚಿತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸದಸ್ಯರ ಪರಿಚಯ ಖುದ್ದಾಗಿ ಇರಬೇಕು. ಇದರಂತೆ ಎಲ್ಲರನ್ನೂ ಪರಿಚಯ ಮಾಡಿಕೊಳ್ಳುತ್ತಿರುವದಾಗಿ ಅವರು ಹೇಳಿದರು. ಲೋಕೇಶ್‍ಸಾಗರ್ ಅವರನ್ನು ಭೇಟಿ ಮಾಡಿ ತಮ್ಮ ಅಭಿಲಾಷೆಯನ್ನು ಹೇಳಿರುವುದನ್ನು ಒಪ್ಪಿಕೊಂಡ ಅವರು, ಈ ಸಂದರ್ಭ ಸಾಗರ್ ತಮಗೆ ಇನ್ನಷ್ಟು ಕನಸಿದೆ ಅಲ್ಲದೆ, ಹಲವರ ಒತ್ತಾಯವೂ ಇದೆ ಎಂದಿದ್ದಾರೆ. ಆದರೂ ತಾವೂ ಅಧ್ಯಕ್ಷ ಸ್ಥಾನಾಕಾಂಕ್ಷಿ ಎಂಬುದನ್ನು ಅವರ ಗಮನಕ್ಕೆ ತಂದಿರುವದಾಗಿ ಕಾಮತ್ ತಿಳಿಸಿದರು. ಸದ್ಯದ ಮಟ್ಟಿಗೆ ಇವರಿಬ್ಬರು ಮಾತ್ರ ಪ್ರಬಲ ಆಕಾಂಕ್ಷಿಗಳಾಗಿದ್ದು ಮುಂದಿನ ದಿನಗಳಲ್ಲಿ ಮತ್ತೆ ಇನ್ಯಾರು ಆಸಕ್ತಿ ತೋರಲಿದ್ದಾರೆ ಎಂಬದನ್ನು ಕಾದು ನೋಡಬೇಕಿದೆ.

ಕೊಡಗು ಜಿಲ್ಲೆಯಲ್ಲಿ ಸುಮಾರು 2500ಕ್ಕೂ ಅಧಿಕ ಮಂದಿ ಸದಸ್ಯರಿದ್ದು, ಇವರಲ್ಲಿ 2400ರಷ್ಟು ಮಂದಿ ಮತದಾನದ ಹಕ್ಕನ್ನು ಹೊಂದಿದ್ದಾರೆ. ಎಲ್ಲದಕ್ಕೂ ಮಾರ್ಚ್ ವೇಳೆಗೆ ವೇದಿಕೆ ಸಿದ್ಧಗೊಳ್ಳಲಿದೆ.