ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಮಡಿಕೇರಿ, ನ. 22: ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ವಿಪುಲ್ ಕುಮಾರ್ ಅವರು ಇಂದು ಜಿಲ್ಲೆಗೆ ಭೇಟಿ ನೀಡಿದ್ದರು. ಕಾವೇರಿ ಹಾಲ್‍ನಲ್ಲಿ ಕೊಡಗಿನ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡು ಜಿಲ್ಲೆಯ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನೆ ಬಗ್ಗೆ ಸಭೆ ನಡೆಸಿದ ವಿಪುಲ್ ಕುಮಾರ್ ಅವರು, ಕಾನೂನು ಸುವ್ಯವಸ್ಥೆ ಸಂಬಂಧ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಉಪಸ್ಥಿತರಿದ್ದರು.ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದ ಈ ಸಭೆ ಬೆಳಿಗ್ಗೆಯಿಂದ ಸಂಜೆತನಕವೂ ಜರುಗಿದ್ದು, ಕಾನೂನು ಸುವ್ಯವಸ್ಥೆಗಳ ಕುರಿತಾಗಿ ನಿರ್ದೇಶನ ನೀಡಲಾಯಿತೆನ್ನಲಾಗಿದೆ.