ನಾಪೆÉÇೀಕ್ಲು, ನ. 22: ನಾಪೆÉÇೀಕ್ಲು ನಾಡು ಕೋಅಪರೇಟಿವ್ ಮಹಿಳಾ ಸಮಾಜದ ಅಧ್ಯಕ್ಷೆಯಾಗಿ ರೇಷ್ಮಾ ಉತ್ತಪ್ಪ ಅವರು ಅವಿರೋಧವಾಗಿ ಆಯ್ಕೆಯಾದರು.

ಮಹಿಳಾ ಸಮಾಜದ ಸಭಾಂಗಣದಲ್ಲಿ ಬೊಪ್ಪಂಡ ಶೈಲಾ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು. ಉಪಾಧ್ಯಕ್ಷರಾಗಿ ಬೊಪ್ಪಂಡ ಶೈಲಾ ಬೋಪ್ಪಯ್ಯ, ನಿರ್ದೇಶಕರಾಗಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಬಿದ್ದಾಟಂಡ ಗಿರಿಜಾ ಬೋಪಣ್ಣ, ಮುಂಡಂಡ ಸುಶೀಲಾ ಸೋಮಣ್ಣ, ಕೇಟೋಳಿರ ಶಾರದ ಪಳಂಗಪ್ಪ, ಅಪ್ಪಾರಂಡ ಡೆಸ್ಸಿ ತಿಮ್ಮಯ್ಯ, ಕುಂಡ್ಯೋಳಂಡ ಕವಿತ ಗಣಪತಿ, ಪುಲ್ಲೇರ ಪದ್ಮಿನಿ ಭೀಮಯ್ಯ, ಮತ್ತು ಆಸ್ಮಾ ಅವರನ್ನು ಆಯ್ಕೆ ಮಾಡಲಾಯಿತು.