ಪಾಲಿಬೆಟ್ಟ, ನ. 21: ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಸಂಪೂರ್ಣ ಹಾಳಾಗಿದ್ದ ಸಿದ್ದಾಪುರ-ಪಾಲಿಬೆಟ್ಟ ರಸ್ತೆಯ ಕೆಲಸ ತಾ. 23 ರಿಂದ ಪ್ರಾರಂಭವಾಗಲಿದ್ದು, ರಸ್ತೆ ಅಗಲೀಕರಣಕ್ಕೆ ರಸ್ತೆ ಬದಿಯ ಬೆಳೆಗಾರರು ಚರಂಡಿ ನಿರ್ಮಾಣಕ್ಕೆ ಜಾಗ ನೀಡಬೇಕೆಂದು ತಾಲೂಕು ಪಂಚಾಯಿತಿ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಮನವಿ ಮಾಡಿದ್ದಾರೆ.
8 ತಿಂಗಳ ಹಿಂದೆ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದರು. ಕೊರೊನಾ ಲಾಕ್‍ಡೌನ್ ಸಮಸ್ಯೆಯಿಂದ ಕಾರ್ಮಿಕರ ಕೊರತೆ ಹಿನ್ನಲೆ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ತಾ. 23 ರಿಂದ ಕಾಮಗಾರಿ ಪ್ರಾರಂಭವಾಗಲಿದ್ದು, ಮಳೆ ಹಾನಿ ಯೋಜನೆಯಡಿಯಲ್ಲಿ ಅಂದಾಜು ರೂ. 4.20 ಕೋಟಿ ವೆಚ್ಚದಲ್ಲಿ ಮೂರು ಸೇತುವೆ ಹಾಗೂ ರಸ್ತೆ ಅಗಲೀಕರಣಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.