ಕೂಡಿಗೆ: ಕೆನರಾ ಬ್ಯಾಂಕ್ ಇಂದು ಭಾರತ ಸೇರಿದಂತೆ ಐದು ಶಾಖೆಗಳನ್ನು ವಿಶ್ವದಲ್ಲಿ ಪ್ರಾರಂಬಿಸಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಕೂಡಿಗೆಯ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ದೀಪ್‍ಕುಮಾರ್ ರಾವ್ ಅವರು 115ನೇ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ಸಂದರ್ಭದಲ್ಲಿ ಹೇಳಿದರು.

ಕೆನರಾ ಬ್ಯಾಂಕ್‍ನ 6000 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಕೂಡಿಗೆ ಕೆನರಾ ಬ್ಯಾಂಕ್ ಶಾಖೆಯು 45 ವರ್ಷಗಳಿಂದ ಉತ್ತಮವಾದ ಸೇವೆಯನ್ನು ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಗ್ರಾಹಕರಲ್ಲಿ ಮನವಿ ಮಾಡಿದರು. ಈ ಸಂದರ್ಭ ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ರೈತರಿಗೆ ಹೈನುಗಾರಿಗೆ ಅಭಿವೃದ್ಧಿಗೆ ಸಾಲ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರ ಆರ್‍ಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್ ನೆರವೇರಿಸಿ ಮಾತನಾಡಿದರು. ಈ ಸಂದರ್ಭ ಶಾಖೆಯ ಹೆಚ್.ಕೆ. ಶಿವಕುಮಾರ್, ಜಯಕೃಷ್ಣ, ಬೀನ್ ಬಾಬು ಸಿಬ್ಬಂದಿಗಳಾದ ಉಮಾವತಿ, ಪಾಲಾಕ್ಷ, ಹಶೀತಾ ಮೊದಲಾದವರು ಹಾಜರಿದ್ದರು.ನಾಪೆÇೀಕ್ಲು: ಕೆನರಾ ಬ್ಯಾಂಕ್ ಸಂಸ್ಥಾಪಕ ಅಂಬಳೆ ಸುಬ್ಬರಾವ್ ಪೈ ಅವರ 115ನೇ ಜನ್ಮ ದಿನಾಚರಣೆಯ ಅಂಗವಾಗಿ ನಾಪೆÇೀಕ್ಲು ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಂಸ್ಥಾಪಕರ ದಿನಾಚರಣೆ ನಡೆಯಿತು. ಬ್ಯಾಂಕಿನ ವ್ಯವಸ್ಥಾಪಕ ಪ್ರಶಾಂತ್ ಬಹೋದರಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ನಿವೃತ್ತ ಅಧ್ಯಾಪಕ ಕಾಟುಮಣಿಯಂಡ ಮುತ್ತಪ್ಪ, ಸಿಬ್ಬಂದಿಗಳಾದ ಅನೀಷ್ ಮನು, ವಿಮಲ್‍ರಾಜ್, ಪ್ರವೀಣ್‍ರಾಜ್, ಸುನಿಲ್, ಪೌಲೋಸ್, ಓಂಪ್ರಕಾಶ್, ದೇವಪ್ಪ, ಸುಧಾ, ಸಮ್ಮಾಸ್ ಮತ್ತು ಬ್ಯಾಂಕಿನ ಗ್ರಾಹಕರು ಇದ್ದರು.