ಪಾಲಿಬೆಟ್ಟ, ನ. 21: ಪಾಲಿಬೆಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2019-20ನೇ ಸಾಲಿನಲ್ಲಿ ರೂ. 15.11 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶ್ಯಾಮ್ ಚಂದ್ರ ತಿಳಿಸಿದ್ದಾರೆ.

ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2021ರಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಸಂಘ ಈ ಸಾಲಿನಲ್ಲಿ ಒಟ್ಟು 112.86 ಕೋಟಿ ವಾರ್ಷಿಕ ವ್ಯವಹಾರ ನಡೆಸಿ ಸಂಘವು ಪ್ರಸಕ್ತ 970 ಸದಸ್ಯರನ್ನು ಹೊಂದಿದೆ. ರೂ 1.16 ಕೋಟಿ ಬಂಡವಾಳ ಹೊಂದಿದೆ.

ಈ ಸಾಲಿನಲ್ಲಿ ರೂ. 21.42. ಕೋಟಿಗಳಷ್ಟು ಠೇವಣಿ ಹೊಂದಿದ್ದು ಸಂಘದ ಕ್ಷೇಮನಿಧಿ 2.50ಕೋಟಿ, ಇತರ ಸಂಸ್ಥೆಗಳಲ್ಲಿ 5.19 ಕೋಟಿ ತೊಡಗಿಸಿದ್ದು, ಸಂಘದಲ್ಲಿ ಕೃಷಿ ಹಾಗೂ ಕೃಷಿಯೇತರ ಸಾಲ 24.51 ಕೋಟಿ ವಿತರಿಸಲಾಗಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನಿಂದ ರೂ. 5.87 ಕೋಟಿ ಸಾಲ ಪಡೆದಿದೆ. ಸಂಘದ ಒಟ್ಟು ದುಡಿಯುವ ಬಂಡವಾಳ 33.26 ಕೋಟಿಯಾಗಿದ್ದು ವಾರ್ಷಿಕ ಮಹಾ ಸಭೆ ತಾ. 23ರಂದು ನಡೆಯಲಿದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಕೊಲ್ಲಿರ ದರ್ಮಜ, ನಿರ್ದೇಶಕರಾದ ವಿ.ವಿ. ಡಾಲು, ಜೆ.ಕೆ. ಸುಭಾಷಿಣಿ, ಅನಿತ ಸುರೇಶ್, ಶೋಭ ಕುಟ್ಟಪ್ಪ, ಅಜಿತ್ ಕರುಂಬಯ್ಯ, ಎಂ.ಬಿ. ಪವಿತ್ರ, ಪಿ.ಸಿ. ತಮ್ಮಯ್ಯ, ಸೊಮೇಶ್, ಬಿ.ಡಿ. ಗಣೇಶ್, ಹೆಚ್.ಕೆ. ದಿನೇಶ್, ಟಿ.ಕೆ. ಯಶೋಧರ, ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಕೆ.ಎ. ಶಶಿಕಲಾ ಉಪಸ್ಥಿತರಿದ್ದರು.