ಮಡಿಕೇರಿಯಲ್ಲಿ ಸಂಗ್ರಹವಾಗುವ ಕಸಗಳನ್ನು ಸುರಿಯಲು ಜಾಗವಿಲ್ಲದಂತಾಗಿದೆ. ಇರುವ ಜಾಗದಲ್ಲಿ ಸುರಿದು ದೊಡ್ಡ ಕಸದ ಗುಡ್ಡವೇ ನಿರ್ಮಾಣವಾಗಿದೆ. ಅಲ್ಲಿಂದ ಬೇರೆಡೆಗೆ ಹೋಗುವಂತೆ ಉಚ್ಚ ನ್ಯಾಯಾಲಯವೇ ಆದೇಶಿಸಿದೆ.., ಇಂತಹ ಸಂದಿಗ್ಧ ಪರಿಸ್ಥಿಯಲ್ಲಿರೋವಾಗ ಮೇಕೇರಿಯಲ್ಲಿರುವ ಪ್ರತಿಷ್ಠಿತ ರೆಸಾರ್ಟ್ ಒಂದರ ಕಸಗಳನ್ನು ತಂದು ಮಡಿಕೇರಿಯಲ್ಲಿ ಸುರಿಯಲಾಗುತ್ತಿದೆ.(ಮೊದಲ ಪುಟದಿಂದ) ರಾತ್ರಿ ಗಸ್ತಿನಲ್ಲಿದ್ದ ಪೌರಾಯುಕ್ತರ ತಂಡ ಮೊನ್ನೆ ರಾತ್ರಿ ನಗರ ಸಭೆ ವ್ಯಾಪ್ತಿಯ ಕಾವೇರಿ ಕಲಾ ಕ್ಷೇತ್ರದ ಆವರಣದಲ್ಲಿ ನಿಲ್ಲಿಸಿದ್ದ ನಗರ ಸಭೆಯ ಕಸ ಸಾಗಣೆ ಟ್ರ್ಯಾಕ್ಟರ್‍ಗೆ ಮಾರುತಿ ವ್ಯಾನ್‍ನಲ್ಲಿ ಕಸವನ್ನು ತಂದು ಸುರಿಯುತ್ತಿದ್ದುದು ಗೋಚರಿಸಿದೆ. ಇದನ್ನು ತಡೆದ ನಗರಸಭೆ ತಂಡ ಕಸವನ್ನು ವಾಪಸ್ ಕಳುಹಿಸಿದೆ. ಕಸ ಸುರಿಯಲು ಬಂದವರಿಗೆ ಎಚ್ಚರಿಕೆ ನೀಡಿ ಇನ್ನು ಮುಂದಕ್ಕೆ ಸುರಿಯದಂತೆ ಸೂಚಿಸಲಾಗಿದೆ ಎಂದು ಪೌರಾಯುಕ್ತ ರಾಮ್‍ದಾಸ್ ತಿಳಿಸಿದ್ದಾರೆ.ಇದೇ ರೀತಿ ಇನ್ಯಾವ ರೆಸಾರ್ಟ್‍ಗಳು, ಹೋಂಸ್ಟೇಗಳು ಕಸವನ್ನು ತಂದು ಸುರಿಯುತ್ತಿವೆಯೋ..? ಹಿಂಗಾದರೆ ಕಸದ ಗುಡ್ಡ ಬೆಳೆಯದೇ ಇನ್ನೇನಾಗುತ್ತೆ ಹೇಳಿ...!?