ಸೋಮವಾರಪೇಟೆ, ನ. 20: ಸಮೀಪದ ಐಗೂರು ಅರೆಭಾಷೆ ಗೌಡ ಸಮಾಜದ ವತಿಯಿಂದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಯಡವಾರೆ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ನಂಗಾರು ಕಿರಣ್-ಸುಮಿತ್ರ ಅವರ ಪುತ್ರಿ ಶ್ರಾವಣಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಬಾರನ ಭರತ್-ಶೋಭಾ ಅವರ ಪುತ್ರಿ ಗ್ರೀಷ್ಮ ಅವರುಗಳಿಗೆ, ದಾನಿಗಳಾದ ಕಾಳೇರಮ್ಮನ ಸಾವಿತ್ರಿ ಪಾಲಾಕ್ಷ ಅವರು ಪ್ರೋತ್ಸಾಹ ಧನ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಕಡ್ಲೇರ ಹೊನ್ನಪ್ಪ ವಹಿಸಿದ್ದರು. ಗೌರವಾಧ್ಯಕ್ಷ ಪೊನ್ನಚ್ಚನ ಗಣಪತಿ ಉದ್ಘಾಟಿಸಿದರು. ನಾರ್ಕೋಡಿ ಧನುಷ, ಮೂಲೆಮಜಲು ಜಯಕುಮಾರ್, ನಂಗಾರು ಕೀರ್ತಿಪ್ರಸಾದ್, ಮೂಲೆಮಜಲು ಮನೋಜ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.