ಪೆರಾಜೆ, ನ. 20: ದೇಶದಲ್ಲಿ ಪ್ರತಿ ಕುಟುಂಬಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಧಾನಿಯವರ ಮಹತ್ವದ ಉದ್ದೇಶವಾದ ಸೌಭಾಗ್ಯ ಯೋಜನೆ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಿಂದ ಬಿರುಸಿನಿಂದ ನಡೆದಿದೆ. ಇದು ಪೂರ್ಣಗೊಂಡ ಹಿನ್ನೆಲೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಬಂಗಾರಕೋಡಿಯ ದರ್ಬಿಜಲ್ನಲ್ಲಿ ಉದ್ಘಾಟಿಸಿದರು.
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶ ಹಾಗೂ ಪೆರಾಜೆ ಪಂಚಾಯಿತಿ ವ್ಯಾಪ್ತಿಯ ಕೊನೆಯ ಮನೆಯಾಗಿರುವ ವಿದ್ಯಾ ಹರೀಶ್ ಬಂಗಾರಕೋಡಿ ಅವರ ಮನೆಯಲ್ಲಿ ವಿದ್ಯುತ್ ಬಲ್ಬ್ ಉರಿಸುವುದರ ಮೂಲಕ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ದರ್ಬಿಜಲ್ ಪರಿಸರದ ಮನೆಗಳಿಗೆ ರಸ್ತೆ ಸಂಪರ್ಕದ ಸಮಸ್ಯೆ ಇದ್ದು, ಇಲ್ಲಿಗೆ ಸರ್ವ ಋತು ರಸ್ತೆ ನಿರ್ಮಾಣ ಮಾಡಿಕೊಡುವಂತೆ ಶಾಸಕರಿಗೆ ಮನವಿ ನೀಡಲಾಯಿತು.
ಮಡಿಕೇರಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಶಕ್ತಿ ಕೇಂದ್ರದ ಪ್ರಮುಖ್ ನಂಜಪ್ಪ ನಿಡ್ಯಮಲೆ, ಸಹ ಪ್ರಮುಖ್ ನಂಜಪ್ಪ ನಿಡ್ಯಮಲೆ, ಮಾಜಿ ಪಂಚಾಯಿತಿ ಅಧ್ಯಕ್ಷ ಹೊನ್ನಪ್ಪ ಅಮೆಚೂರ್, ಮಡಿಕೇರಿ ತಾಲೂಕು ಭಾ.ಜ.ಪ. ಕಾರ್ಯದರ್ಶಿ ಪ್ರಸನ್ನ. ನೆಕ್ಕಿಲ, ಮಡಿಕೇರಿ ತಾಲೂಕು ಗ್ರಾಮಾಂತರ ಬಿ.ಜೆ.ಪಿ. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ ಮೂಲೆಮಜಲು, ಸುಭಾಶ್ ಬಂಗಾರಕೋಡಿ, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಸಿಬ್ಬಂದಿಗಳಾದ ಅನಿಲ್ ಕೆ.ಟಿ., ವಿಜಯ ಕೊಯನಾಡು, ಫಲಾನುಭವಿಗಳಾದ ವಿದ್ಯಾ ಹರೀಶ್, ಚಂದ್ರಶೇಖರ್, ಲಿಂಗೇಶ್ವರ, ಶೇಷಪ್ಪ, ನೇಮಿಚಂದ್ರ ಸೇರಿದಂತೆ ಸ್ಥಳೀಯ ನಾಯಕರು, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.