ವೀರಾಜಪೇಟೆ, ನ. 19: ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ವೀರಾಜಪೇಟೆಯಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆವರಣದಲ್ಲಿ ನೂತನ ನಂದಿನಿ ಹಾಲು ಘಟಕವನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.

ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿದೆರ್Éೀಶಕ ಗೋಪಾಲಯ್ಯ ಮಾತನಾಡಿ, ಒಕ್ಕೂಟದ ಅಡಿಯಲ್ಲಿ 1500 ಅಂಗ ಸಂಸ್ಥೆಗಳಿದೆ. ಪ್ರತಿದಿನ 11.50 ಲಕ್ಷ ಹಾಲು ಸಂಗ್ರಹವಾಗುತ್ತಿದೆ. 25 ಸಾವಿರ ಲೀಟರ್ ಐಸ್‍ಕ್ರೀಮ್ ಉತ್ಪನ್ನಕ್ಕೆ ಬಳಸಲಾಗುತ್ತದೆ. ಭಾರತೀಯ ಸೇನೆಗೆ ಪ್ರತಿದಿನ 70 ಸಾವಿರ ಲೀಟರ್ ಹಾಲು ಕಳುಹಿಸಲಾಗುತ್ತದೆ. 80 ಬಗೆಯ ಹಾಲಿನ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ಒಂದು ಸಾವಿರ ಕೋಟಿ ವೆಚ್ಚದಲ್ಲಿ ನೂತನ ಹಾಲು ಉತ್ಪಾದಕರ ಘಟಕವನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ಘಟಕದಲ್ಲಿ ಯಾವುದೇ ದರ ಹೆಚ್ಚಳಕ್ಕೆ ಅವಕಾಶ ಇಲ್ಲ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ಹರ್ಷವರ್ಧನ್, ಮುಖ್ಯಾಧಿಕಾರಿ ಶ್ರೀಧರ್, ಹಾಲು ಒಕ್ಕೂಟದ ನಿರ್ದೇಶಕರುಗಳಾದ ನಂದೀಶ್, ಪ್ರಿಯರಂಜನ್ ಮತ್ತಿತರರು ಇದ್ದರು.