ಮಡಿಕೇರಿ, ನ. 19: ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ, ಮಡಿಕೇರಿಯಲ್ಲಿ ತಾ. 13 ರಂದು ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನಿಂದ ಸಾಲ ಪಡೆದು ದ್ವಿತೀಯ ಪಿಯುಸಿ ಹಾಗೂ ಪದವಿ ಕಾಲೇಜಿನಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.
ವೇದಿಕಾ ಕೋಡಿ, ಹವ್ಯಶ್ರೀ ಹೊದ್ದೆಟ್ಟಿ, ಹರ್ಷಿತ ಪಟ್ಟೆಮನೆ, ದೇಚಮ್ಮ ಪಾಡಂಡ, ಸುಹಾಸ್ ಕೊಡಗನ, ಪೊನ್ನಣ್ಣ ಮುಕ್ಕಾಟೀರ, ಭೂಮಿಕ ಮುತ್ತಪ್ಪ ಅಪ್ಪಚಟ್ಟೋಳಂಡ, ಧನ್ಯ ಕೇಟೋಳಿರ, ಸಾನ್ಯ ಕಾವೇರಮ್ಮ ಬಾಚರಣಿಯಂಡ, ಹವ್ಯಶ್ರೀ ನಿಡ್ಯಮಲೆ, ತಂಗಮ್ಮ ಅಪ್ಪಚೀರ, ವಿಭಾ ಮಾತಂಡ, ಕೌಶಿಕ ತೊತ್ತಿಯನ, ಗಣಪತಿ ನಾಪಂಡ, ಸುಪ್ರಿತ ಬಲ್ಯಮನೆ, ರಕ್ಷಿತಾ ಡಿ.ಜಿ., ಸ್ಪೂರ್ತಿ ಬಾಳಾಡಿ, ಡೈನಾ ಕೊಟ್ಟುಕತ್ತಿರ, ಧರಿತ್ರಿ ಪಾಡಿಯಮ್ಮನ, ಕಿಶಾನ್ ತೊಕ್ಕುಳಿ, ಪೃಥ್ವಿ ಮುಕ್ಕಾಟೀರ, ಶ್ರೇಯ ಬಾಳಾಡಿ, ಪೂಜಾ ಕೊಟ್ಟಕೇರಿಯನ, ಅಪ್ಪಚ್ಚು ಕಿರ್ತನ್ ಕೇಕಡ, ಗಂಗಮ್ಮ ಅಪ್ಪಚೀರ ಅವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಬ್ಯಾಂಕಿನ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.