ಸುಂಟಿಕೊಪ್ಪ ಬಳಿಯ ಹೆರೂರು ನಿವಾಸಿ ಎಸ್.ಪಿ. ನಿಂಗಪ್ಪ (68) ಅವರು ತಾ. 18 ರಂದು ನಿಧನ ಹೊಂದಿದರು. ಮೃತರು ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಮೃತ ನಿಂಗಪ್ಪ ಹಿರಿಯ ಸಹಕಾರಿಯಾಗಿದ್ದು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾಗಿ, ಸುಂಟಿಕೊಪ್ಪ ಸಹಕಾರ ಸಂಘದ ನಿರ್ದೇಶಕರು ಹಾಗೂ ಅಧ್ಯಕ್ಷರಾಗಿ, ಸುಂಟಿಕೊಪ್ಪ ಹೋಬಳಿ ಬಿಜೆಪಿ ಅಧ್ಯಕ್ಷರಾಗಿ, ಕೊಡಗು ಕಾಫಿ ಬೆಳೆಗಾರರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೃತರ ನಿಧನಕ್ಕೆ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಸುಂಟಿಕೊಪ್ಪ ಸಹಕಾರ ಸಂಘದ ಅಧ್ಯಕ್ಷ ದಾಸಂಡ ರಮೇಶ್ ಸಂತಾಪ ಸೂಚಿಸಿದ್ದಾರೆ.