ಕೂಡಿಗೆ, ನ. 19: ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಮತ್ತು ಮನೆಯ ಸಮೀಪದಲ್ಲಿ ಇಂಗುಗುಂಡಿಯನ್ನು ತೆಗೆದು ನೀರಿನ ಸಂರಕ್ಷಣೆಗೆ ಅವಕಾಶಗಳು ಇರುವುದರಿಂದ ಗ್ರಾಮದ ಸಾರ್ವಜನಿಕರು ಉದ್ಯೋಗ ಖಾತರಿ ಯೋಜನೆಯ ನೋಂದಣಿಯನ್ನು ಮಾಡಿಸಿಕೊಳ್ಳುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ಮನವಿ ಮಾಡಿದ್ದಾರೆ.
ಅವರು ಸೀಗೆಹೊಸೂರು ಗ್ರಾಮದಲ್ಲಿ ಇಂಗು ಗುಂಡಿಯ ಯೋಜನೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡುತ್ತಾ, ಉದ್ಯೋಗ ಖಾತರಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು. ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಇರುವ ಸವಿಸ್ತಾರವಾದ ಮಾಹಿತಿ ನೀಡಿದರು. ಫಲಾನುಭವಿಗಳ ಹಣ ನೇರವಾಗಿ ಅವರ ಖಾತೆ ಸೇರುವ ಬಗ್ಗೆ ಮಾಹಿತಿಯನ್ನು ನೀಡುವ ಜೊತೆಯಲ್ಲಿ ಯಾವ ಯಾವ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇದೆ ಎಂಬದನ್ನು ತಿಳಿಸಿದರು.
ಈ ಸಂದರ್ಭ ಕಾರ್ಯದರ್ಶಿ ಶಿಲ್ಪಾ ಸೇರಿದಂತೆ ಸಿಬ್ಬಂದಿ ವರ್ಗದವರು ಭಾಗವಹಿಸಿದರು.