ಕೂಡಿಗೆ, ನ. 18: ಹಾರಂಗಿ ಅಣೆಕಟ್ಟೆಯ ಮುಂಭಾಗದ ಬೃಂದಾವನ ಉದ್ಯಾನ ಪಕ್ಕದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಂಗೀತ ಕಾರಂಜಿ ಚಾಲನೆ ಪ್ರಾರಂಭವಾಗಿದ್ದು, ಸಂಜೆ ವಿದ್ಯುತ್ ಅಲಂಕೃತ ನೀರಿನ ನ್ಯತ್ಯ ಕಣ್ಮನ ಸೆಳೆಯುತ್ತಿದೆ.
ಕಾವೇರಿ ನೀರಾವರಿ ನಿಗಮ ಹಾರಂಗಿ ವೃತ್ತ ಯೋಜನೆಯ ಪ್ರಕಾರ ಆಧುನಿಕ ತಂತ್ರಜ್ಞಾನದ ಮತ್ತು ನೂತನ ಯಂತ್ರೋಪಕರಣಗಳ ಅಳವಡಿಕೆ ಮೂಲಕ ಹೊಸ ತಾಂತ್ರಿಕತೆಯ ನಿಯಮಗಳ ಆಧಾರದ ಜೋಡಣೆ ಮಾಡಲಾಗಿದೆ. ಹಾಡಿಗೆ ತಕ್ಕ ನೃತ್ಯಗಳನ್ನು ನೀರಿನ ಮೂಲಕ ಅಳವಡಿಸಲಾಗಿದೆ.
ಆರಂಭದ ದಿನ ಕುಶಾಲನಗರ, ಕೂಡಿಗೆ, ಗುಡ್ಡೆಹೊಸೂರು, ಮುಳ್ಳುಸೋಗೆ ಕೂಡುಮಂಗಳೂರು ಗ್ರಾಮಗಳ ಜನತೆ ಭೇಟಿ ನೀಡಿ ಸಂಗೀತ ಕಾರಂಜಿ ವೀಕ್ಷಣೆ ಮಾಡಿದರು.