ಮಡಿಕೇರಿ, ನ. 18: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕಾವೇರಿ ಕಾಲೇಜು, ವೀರಾಜಪೇಟೆ ಸಹಯೋಗದಲ್ಲಿ ಪಟ್ಟೋಲೆ ಪಳಮೆ-ಆರಬೇರ ವಿಚಾರ ಸಂಕಿರಣ ತಾ. 21 ರಂದು ಬೆಳಿಗ್ಗೆ 10 ಗಂಟೆಗೆ ವೀರಾಜಪೇಟೆಯ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಲಿದೆ.

ಹಿರಿಯ ಸಾಹಿತಿ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ, ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಇವರು ಬರೆದ ‘ಬದ್‍ಕ್‍ರ ನಡೆ’ ಪುಸ್ತಕ ಮತ್ತು ಕಸ್ತೂರಿ ಗೋವಿಂದಮ್ಮಯ್ಯ ಇವರು ಬರೆದ “ಶ್ರೀರಾಮ ರಸಾಯನ” ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ತದನಂತರ ಪಟ್ಟೋಲೆ ¥

Àಳಮೆ: ಆರಬೇರದ ವಿಚಾರಗೋಷ್ಠಿ ನಡೆಯಲಿದೆ. ಬೆಳಿಗ್ಗೆ 11.15 ರಿಂದ 12 ಗಂಟೆಯವರೆಗೆ ನಡೆಯುವ ಗೋಷ್ಠಿ-1ರ ಅಧ್ಯಕ್ಷತೆಯನ್ನು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ವಿಠಲ ನಾಣಯ್ಯ ವಹಿಸಿಕೊಳ್ಳಲಿದ್ದಾರೆ. ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕಿ ಆಂಗೀರ ಕುಸುಮ ಭಾಗವಹಿಸಲಿದ್ದಾರೆ. “ನಡಿಕೇರಿಯಂಡ ಚಿಣ್ಣಪ್ಪ-ಬಾಳ್ ಬದ್‍ಕ್” ಈ ವಿಷಯದ ಕುರಿತು ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ವಿಚಾರ ಮಂಡನೆ ಮಾಡಲಿದ್ದಾರೆ. 12 ರಿಂದ 12.45 ಗಂಟೆಯವರೆಗೆ ನಡೆಯುವ ಗೋಷ್ಠಿ-2ರ ಅಧ್ಯಕ್ಷತೆಯನ್ನು ಕೆ.ಡಿ.ಸಿ.ಸಿ. ಬ್ಯಾಂಕ್‍ನ ನಿವೃತ್ತ ಡಿ.ಜಿ.ಎಂ. ತೋರೆರ ಮುದ್ದಯ್ಯ ವಹಿಸಿಕೊಳ್ಳಲಿದ್ದಾರೆ.

ಅಖಿಲ ಕೊಡವ ಸಮಾಜ ಯೂತ್ ವಿಂಗ್‍ನ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಇವರು ಭಾಗವಹಿಸಲಿದ್ದಾರೆ. “ಕೊಡವ ಸಂಸ್ಕøತಿರ ಚಾರಿತ್ರಿಕ ದಾಖಲೆಯಾಯ್ತ್ ಪಟ್ಟೋಲೆ ಪಳಮೆ” ಎಂಬ ವಿಷಯದ ಕುರಿತಾಗಿ ಕೊಡವ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ನಿಕಟಪೂರ್ವ ಸಂಯೋಜಕ ಪ್ರೊ. ಕೋಡೀರ ಲೋಕೇಶ್ ಮೊಣ್ಣಪ್ಪ ವಿಚಾರ ಮಂಡನೆ ಮಾಡಲಿದ್ದಾರೆ.