ಮಡಿಕೇರಿ, ನ. 18: ಮಡಿಕೇರಿಯ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ ವಿಚಾರ ವಿನಿಮಯ ಕಾರ್ಯಕ್ರಮ ತಾ. 19 ರಂದು (ಇಂದು) ನಗರದ ಕಾರುಣ್ಯ ಸದನ, ಸಿಪಿಸಿ ಲೇಔಟ್ನಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ವಿಷಯ ಮಂಡನೆಯನ್ನು ಮುಹಮ್ಮದ್ ಕುಂಞÂ, ರಾಜ್ಯ ಕಾರ್ಯದರ್ಶಿ, ಜ.ಇ. ಹಿಂದ್ ಕರ್ನಾಟಕ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೆಚ್.ಎಸ್. ಚೇತನ್, ಅಧ್ಯಕ್ಷರು, ರಾಜ್ಯ ಪ್ರಾಥಮಿಕ ಶಾಲಾ ಸಮಿತಿ, ಕೊಡಗು ಜಿಲ್ಲೆ, ಕಾರೆರ ಕವನ್, ಅಧ್ಯಕ್ಷರು, ವಕೀಲರ ಸಂಘ, ಮಡಿಕೇರಿ, ಉಷಾ ಪ್ರೀತಮ್, ಪತ್ರಕರ್ತೆ, ವೀರಾಜಪೇಟೆ ಭಾಗವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಅಬ್ದುಸ್ಸಲಾಮ್ ಯು., ಸಂಚಾಲಕರು, ಜ.ಇ. ಹಿಂದ್ ಮಂಗಳೂರು ವಲಯ ವಹಿಸಲಿದ್ದಾರೆ.