ಮಡಿಕೇರಿ, ನ. 18: ಮಕ್ಕಂದೂರು ಗ್ರಾಮ ಪಂಚಾಯಿತಿಗೆ ಒಳಪಡುವ ಮಕ್ಕಂದೂರು, ಹೆಮ್ಮತ್ತಾಳು, ಮುಕ್ಕೋಡ್ಲು, ಆವಂಡಿ , ಹೊದಕಾನ, ಮೇಘತ್ತಾಳು ಗ್ರಾಮಗಳ 2020-21 ನೇ ಸಾಲಿನ ವಾರ್ಡ್ ಸಭೆಗಳನ್ನು ತಾ.19 ರಂದು (ಇಂದು) ನಡೆಸಲು ತೀರ್ಮಾನಿಸಲಾಗಿದೆ. ಬೆಳಿಗ್ಗೆ 11ಕ್ಕೆ ಮುಕ್ಕೋಡ್ಲು, ಆವಂಡಿ, ಹೊದಕಾನ, ಮೇಘತ್ತಾಳು ಗ್ರಾಮಗಳ ವಾರ್ಡ್ ಸಭೆಯು ಮುಕ್ಕೋಡ್ಲು ಸೇತುವೆ ಪಕ್ಕದ ಅಂಗನವಾಡಿಯಲ್ಲಿ ನಡೆಯಲಿದೆ. ಹೆಮ್ಮತ್ತಾಳು, ಮಕ್ಕಂದೂರು ಗ್ರಾಮಗಳ ವಾರ್ಡ್ ಸಭೆಯು ಮಕ್ಕಂದೂರು ಗ್ರಾ.ಪಂ. ಕಚೇರಿಯಲ್ಲಿ 2.30 ಕ್ಕೆ ನಡೆಯಲಿದೆ.
ಮಕ್ಕಂದೂರು, ಮುಕ್ಕೋಡ್ಲು ಗ್ರಾಮಗಳ 2020-21 ನೇ ಗ್ರಾಮ ಸಭೆಯು ತಾ.21 ಮಕ್ಕಂದೂರು ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿದೆ.