ಮಡಿಕೇರಿ, ನ. 18: ಮಂಡ್ಯ ಜಿಲ್ಲೆಯ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾಗಿ ಜಿಲ್ಲೆಯ ಕಲ್ಲೇಂಗಡ ಬಬಿನ್ ಬೋಪಣ್ಣ ಬಡ್ತಿ ಹೊಂದಿದ್ದಾರೆ. 2017ರಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಮುಖಾಂತರ ಗ್ರೂಪ್ ಎ ಅಧಿಕಾರಿಯಾಗಿ ಆಯ್ಕೆಯಾದ ಬೋಪಣ್ಣ ಅವರನ್ನು ಮಂಡ್ಯ ಜಿಲ್ಲೆಯ ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ನಿಯುಕ್ತಿ ಗೊಳಿಸಲಾಗಿತ್ತು. ಇದೀಗ ಜಿಲ್ಲಾ ಉಪನಿರ್ದೇಶಕ ರಾಗಿ ಬಡ್ತಿ ನೀಡಿ ಮಂಡ್ಯದಲ್ಲಿಯೇ ಮುಂದುವರಿಸ ಲಾಗಿದೆ. ಮೂಲತಃ ನಾಪೋಕ್ಲುವಿನವರಾಗಿರುವ ಬೋಪಣ್ಣ ಕುಟುಂಬ ಪ್ರಸ್ತುತ ಮಡಿಕೇರಿಯಲ್ಲಿ ನೆಲೆಸಿದೆ.