ಶನಿವಾರಸಂತೆ, ನ. 18: ತ್ಯಾಗರಾಜ ಕಾಲೋನಿ ಸಮೀಪ 4 ವರ್ಷದ ಮಗುವಿಗೆ ಸ್ಕೂಟಿ (ಕೆಎ-12 ಆರ್-3688) ಡಿಕ್ಕಿಪಡಿಸಿದ ಪರಿಣಾಮ ಮಗುವಿಗೆ ಗಾಯವಾಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತ್ಯಾಗರಾಜ ಕಾಲೋನಿಯ ನಿವಾಸಿ ನಗ್ಮಾ ಪರ್ವಿನ್ ಅವರ ಮಗ ಅರ್ಮಾನ್ (4) ಮನೆಯ ಮುಂದಿನ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಸ್ಕೂಟಿ ಚಾಲಕ ಮಧುರ ಡಿಕ್ಕಿಪಡಿಸಿದ ಪರಿಣಾಮ ಮಗುವಿನ ಕಾಲು ಮತ್ತು ತಲೆಯ ಹಿಂಭಾಗಕ್ಕೆ ಗಾಯವಾಗಿದ್ದು, ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ದಾಖಲುಗೊಳಿಸಲಾಗಿದೆ. ಮಗುವಿನ ತಂದೆ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣಾ ಹೆಡ್ಕಾನ್ಸ್ಟೇಬಲ್ ಎ.ಸಿ. ಸಿದ್ದಯ್ಯ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ.